ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಸಿಬಿ ಇನ್ಸ್ಪೆಕ್ಟರ್, ಹಾಗೂ ಎಸ್ಐ ವರ್ಗಾವಣೆ

ಮಂಗಳೂರು- ನಗರ ಅಪರಾಧ ಪತ್ತೆದಳ (ಸಿಸಿಬಿ)ದ ಇನ್ಸ್‌‌ಪೆಕ್ಟರ್‌ ಶಿವಪ್ರಕಾಶ್‌‌‌‌ ಹಾಗೂ ಎಸ್‌ಐ ಕಬ್ಬಳ್‌‌‌ರಾಜ್‌ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.

ಮಂಗಳೂರು ಡ್ರಗ್ಸ್‌‌ ಮೂಲದ ತನಿಖಾ ತಂಡದ ನೇತೃತ್ವ ವಹಿಸಿದ ಸಿಸಿಬಿ ಇನ್ಸ್‌‌ಪೆಕ್ಟರ್‌‌‌ ಶಿವಪ್ರಕಾಶ್‌‌ ಅವರನ್ನು ಈ ಹಿಂದೆ ವರ್ಗಾವಣೆ ಮಾಡಲಾಗಿದ್ದು, ಕಾಪು ಇನ್ಸ್‌‌ಪೆಕ್ಟರ್‌‌‌ ಮಹೇಶ್‌ ಪ್ರಸಾದ್‌‌‌ ಅವರನ್ನು ಅವರ ಜಾಗಕ್ಕೆ ನಿಯೋಜನೆ ಮಾಡಲಾಗಿತ್ತು.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಇನ್ಸ್‌‌ಪೆಕ್ಟರ್‌‌‌ ಶಿವಪ್ರಕಾಶ್‌‌ ಅವರ ತಂಡ ಕಿರುತೆರೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದಾದ ಕೆಲವು ದಿನಗಳ ಬಳಿಕ ಶಿವಪ್ರಕಾಶ್‌ ಅವರನ್ನು ವರ್ಗಾವಣೆ ಮಾಡಲಾಯಿತು. ಈ ನಡುವೆ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಕಾರಣ, ವರ್ಗಾವಣೆಯನ್ನು ತಡೆಹಿಡಿಯಲಾಗಿತ್ತು.

ಇದೀಗ ಸಿಸಿಬಿ ಇನ್ಸ್‌‌ಪೆಕ್ಟರ್‌ ಶಿವಪ್ರಕಾಶ್‌ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/11/2020 04:10 pm

Cinque Terre

15.42 K

Cinque Terre

0

ಸಂಬಂಧಿತ ಸುದ್ದಿ