ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು ಬ್ರೇಕಿಂಗ್: ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಹೊಟೇಲ್‌ಗೆ ನುಗ್ಗಿದ ಕಾರು: ಇಬ್ಬರಿಗೆ ಗಾಯ

ಕಾಪು: ಉಡುಪಿ ಸಮೀಪದ ಕಟಪಾಡಿ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ. ಉಡುಪಿಯಿಂದ ಕಟಪಾಡಿ ಮೂಲಕ ಮಂಚಕಲ್ ಕಡೆ ಹೋಗುತ್ತಿದ್ದ ಮಹಿಂದ್ರಾ ಕಾರು ಕಟಪಾಡಿ ಜಂಕ್ಷನ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದಲ್ಲೇ ಇದ್ದ ಹೊಟೇಲಿನೊಳಗೆ ನುಗ್ಗಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮತ್ತು ಹೊಟೇಲಿನಲ್ಲಿದ್ದ ಓರ್ವನಿಗೆ ಗಾಯಗಳಾಗಿವೆ‌. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಪಘಾತದಿಂದಾಗಿ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ರಾಯಲ್ ಹಟ್ ಹೋಟೆಲ್‌ಗೆ ಅಪಾರ ನಷ್ಟ ಉಂಟಾಗಿದೆ.

Edited By :
PublicNext

PublicNext

18/08/2022 09:14 pm

Cinque Terre

45.1 K

Cinque Terre

0

ಸಂಬಂಧಿತ ಸುದ್ದಿ