ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ರಥ ಬೀದಿಯಲ್ಲಿ ಗಮನ ಸೆಳೆಯಲಿದೆ ಕಾಪುವಿನ ಪೇಟ್ಲ

ಕಾಪು : ಉಡುಪಿಯಲ್ಲಿ ಆಚರಿಸುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹತ್ತು ಹಲವು ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಮನೋರಂಜನೆಗಾಗಿ ಬಳಸುವ ಪೇಟ್ಲಕ್ಕೆ ಭಾರೀ ಬೇಡಿಕೆಯಿದ್ದು ಜನ್ಮಾಷ್ಟಮಿಗೆ ಒಂದು ವಾರವಿರುವಾಗಲೇ ಮಕ್ಕಳ ಆಟಿಕೆ ಸಾಮಾಗ್ರಿಯಾದ ಪೇಟ್ಲ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಈ ಬಾರಿ ಕಾಪುವಿನ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರು ಅತ್ಯಾಧುನಿಕ ಶೈಲಿಯೊಂದಿಗೆ ಪೇಟ್ಲಗಳನ್ನು ಸಿದ್ದಪಡಿಸಿದ್ದು ಉಡುಪಿ ರಥಬೀದಿಯಲ್ಲಿ ಅದನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.

ಬಿದಿರಿನ ಕೋಲಿನ ಮೂಲಕವಾಗಿ ಸಿದ್ಧಪಡಿಸಲಾಗುವ ಪೇಟ್ಲದಲ್ಲಿ ಶಬ್ಬ ಬರಲು ಬುಲೆಟ್ ಗಳ ರೂಪಾದಲ್ಲಿ ಪೇಟ್ಲ ಕಾಯಿಯನ್ನು ಬಳಸಲಾಗುತ್ತದೆ. ಪೇಟ್ಲ ಕಾಯಿ ಸಿಗದಿದ್ದರೆ ಕೆಸುವಿನ ಎಲೆಯನ್ನು ತುರುಕಿಸಿ ಗಜದಿಂದ ಪೇಟ್ಲ ಹೊಡೆಯಲಾಗುತ್ತದೆ.

ಕಳೆದ ಕೆಲವು ವರ್ಷಗಳ ಹಿಂದಿನವರೆಗೂ ಒಂದು ಪೇಟ್ಲಕ್ಕೆ ನಾಲ್ಕಾಣೆ ದರವಿತ್ತು. ಆದರೆ ಈಗ ಕಾಲ ಬದಲಾಗಿದ್ದು, 50ರೂ. ನಿಂದ 150 ರೂವರೆಗೂ ಮಾರಾಟಗೊಳ್ಳುತ್ತಿದೆ.

ಒಟ್ಟಾರೆಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ಉಡುಪಿ ರಥ ಬೀದಿಗೆ ಆಗಮಿಸುವ ಜನರನ್ನು ಕಾಪುವಿನ ಪೇಟ್ಲ ಗಮನ ಸೆಳೆಯುವುದಂತೂ ನಿಶ್ಚಿತವೆಂಬಂತಾಗಿದೆ.

Edited By : Somashekar
Kshetra Samachara

Kshetra Samachara

13/08/2022 04:04 pm

Cinque Terre

5.39 K

Cinque Terre

0

ಸಂಬಂಧಿತ ಸುದ್ದಿ