ಬಜಪೆ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಿಂಡೇಲ್ ಎಂಬಲ್ಲಿ 4 ಎಕರೆ ಜಾಗದಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ಎಂ ಆರ್ ಎಫ್ ಘಟಕವು ನಿರ್ಮಾಣವಾಗಲಿದ್ದು, ಘಟಕ ನಿರ್ಮಾಣದ ಬಗ್ಗೆ ಸ್ಥಳೀಯರು ಹೈಕೋರ್ಟು ಮೆಟ್ಟಿಲೇರಿದ್ದು ಈ ಬಗ್ಗೆ ದೂರುದಾರರ ಅರ್ಜಿಯನ್ನು ಪರಿಶೀಲಿಸುವಂತೆ ಹೈಕೋರ್ಟ್ ಜಿಲ್ಲಾಧಿಕಾರಿಯವರಿಗೆ ನೀಡಿರುವ ಸೂಚನೆಯಂತೆ ಇಂದು ಸ್ಥಳಕ್ಕೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಬೇಟಿ ನೀಡಿ, ರೈತ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.ಹಾಗೂ ಘಟಕದ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು. ಈ ಸಂದರ್ಭ ಜಿ.ಪಂ ಸಿ ಇ ಓ ಡಾ.ಕುಮಾರ್,ತಾ.ಪಂ ಇ ಒ ಲೋಕೇಶ್,ತಹಶೀಲ್ದಾರ್ ಪುಟ್ಟರಾಜು,ಉಪತಹಶೀಲ್ದಾರ್ ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.
Kshetra Samachara
12/10/2022 05:34 pm