ಉಡುಪಿ: ಜಿಲ್ಲಾ ರಂಗಮಂದಿರ 5 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಅಂದಾಜು ನಕ್ಷೆ ಸಿದ್ಧವಾಗಿದೆ. ಪ್ರಸ್ತುತ ಸರಕಾರ 2.5 ಕೋ.ರೂ. ಅನುದಾನ ಮಂಜೂರು ಮಾಡಿದೆ. ರಂಗ ಮಂದಿರದ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ಅ. 2ರಂದು ಬೆಳಗ್ಗೆ 10ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Kshetra Samachara
01/10/2022 10:20 am