ಉಡುಪಿ: ಪೆರಂಪಳ್ಳಿ -ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನ ಕೃಷ್ಣಾಂಗಾಕರ ಸ್ನಾನ ಘಟ್ಟ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪೆರಂಪಳ್ಳಿ, ಶೀಂಬ್ರ ವಿನಾಯಕ ದೇವಸ್ಥಾನದ ಬಳಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸ್ಥಾನಘಟ್ಟದ ಕೆಲಸ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಸ್ಥಾನ ಘಟ್ಟದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಮಳೆಗಾಲ ಆರಂಭವಾದಾಗಿನಿಂದ ಈ ಪ್ರದೇಶದಲ್ಲಿ ನೀರಿನ ಸೆಳೆತ ಮತ್ತು ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದರಿಂದ ದೇವಸ್ಥಾನದ ಬದಿಯಲ್ಲಿಯೇ ಈ ಸ್ಥಾನಘಟ್ಟದ ಕಾಮಗಾರಿ ಆರಂಭವಾಗಿದ್ದರಿಂದ ದೇವಸ್ಥಾನದ ಹೆಚ್ಚಿನ ಭಾಗ ಕುಸಿತ ಕಂಡಿದೆ.
ದೇವಸ್ಥಾನದ ಹತ್ತಿರದಲ್ಲೇ ಕುಸಿತವಾದ್ದರಿಂದ ಪ್ಲಾಸ್ಟಿಕ್ ಹೊದಿಕೆಯಿಂದ ರಕ್ಷಣೆ ಮಾಡಲಾಗಿದೆ.ಮುಂದಿನ ದಿನ ದೇವಸ್ಥಾನಕ್ಕೆ ಅಪಾಯವಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಹಾಗೂ ಇನ್ನೂ ಹೆಚ್ಚುವರಿವಾಗಿ ನದಿ ತೀರವನ್ನ ಸದೃಢವಾಗಿ ಕಟ್ಟಲು ಹೆಚ್ಚುವರಿ ಅನುದಾನ ಬಿಡುಗಡೆಮಾಡಬೇಕು. ಈ ಸುಂದರ ಸ್ವರ್ಣ ನದಿಯ ವಿಹಂಗಮ ತೀರವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಪ್ರದೇಶವನ್ನು ರಕ್ಷಣೆ ಮಾಡುವಲ್ಲಿ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕೆಂದು ಸ್ಥಳೀಯರಾದ ಜಯಶೆಟ್ಟಿ ಬನ್ನಂಜೆ ,ಗಣೇಶ್ ರಾಜ್ ಸರಳೇಬೆಟ್ಟು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Kshetra Samachara
10/09/2022 06:48 pm