ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೂಕುನುಗ್ಗಲು ತಪ್ಪಿಸಲು ಹೆಚ್ಚುವರಿ ಸಾಪ್ತಾಹಿಕ ಗಣೇಶ ವಿಶೇಷ ರೈಲು ಓಡಾಟ

ಉಡುಪಿ: ಗಣೇಶ ಚತುರ್ಥಿ ಹಬ್ಬದ ಜನರ ನೂಕುನುಗ್ಗುಲನ್ನು ನಿಭಾಯಿಸುವ ಸಲುವಾಗಿ ಕೇಂದ್ರ ರೈಲ್ವೇಸ್‌ನ ಸಹಯೋಗದೊಂದಿಗೆ ಮುಂಬಯಿ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಹೆಚ್ಚುವರಿ ಸಾಪ್ತಾಹಿಕ ಗಣೇಶ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ರೈಲು ನಂ.01173 ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ಎಸಿ ಸಾಪ್ತಾಹಿಕ ವಿಶೇಷ ರೈಲು ಆ.24, ಆ.31 ಹಾಗೂ ಸೆ.7ರ ಬುಧವಾರದಂದು ರಾತ್ರಿ 8:50ಕ್ಕೆ ಲೋಕಮಾನ್ಯ ತಿಲಕ್‌ನಿಂದ ನಿರ್ಗಮಿಸಲಿದ್ದು, ಮರುದಿನ 5:05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ನಂ.01174 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಎಸಿ ಸಾಪ್ತಾಹಿಕ ವಿಶೇಷ ರೈಲು ಆ.25, ಸೆ.1 ಹಾಗೂ ಸೆ.8ರ ಗುರುವಾರ ರಾತ್ರಿ 8:15ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಸಂಜೆ 5:30ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.

Edited By : PublicNext Desk
Kshetra Samachara

Kshetra Samachara

23/08/2022 05:26 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ