ಮುಲ್ಕಿ: ಕಿನ್ನಿಗೋಳಿ ಫಲಿಮಾರು ಹೆದ್ದಾರಿಯ ಬಳ್ಕುಂಜೆ ಪಂಚಾಯಿತಿ ಬಳಿ ರಸ್ತೆಗೆ ತಾಗಿಕೊಂಡು ವಿದ್ಯುತ್ ಪರಿವರ್ತಕ ಅಪಾಯಕಾರಿ ಸ್ಥಿತಿಯಲ್ಲಿದ್ದು ಕೂಡಲೇ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆ ಬದಿಯಲ್ಲಿ ಟ್ರಾನ್ಸ್ಫಾರ್ಮರ್ (ವಿದ್ಯುತ್ ಪರಿವರ್ತಕ) ಬೀಳುವ ಸ್ಥಿತಿಯಲ್ಲಿದ್ದು ಆಧಾರವಾಗಿ ಮರದ ಕಂಬವನ್ನು ನೀಡಲಾಗಿದೆ. ಅಪಾಯದಲ್ಲಿರುವ ಟ್ರಾನ್ಸ್ಫಾರ್ಮರ್ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ಕೂಡ ಪ್ರಸ್ತಾಪವಾಗಿದ್ದರೂ ಮೆಸ್ಕಾಂ ಇಲಾಖೆ ಕೇವಲ ಭರವಸೆಗಳನ್ನು ಮಾತ್ರ ನೀಡಿದೆ ವಿನಹ ತೆರವುಗೊಳಿಸಿಲ್ಲ
ಕಿನ್ನಿಗೋಳಿ ಬಳ್ಕುಂಜೆ ಫಲಿಮಾರು ಪ್ರಧಾನ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಪಾಯ ಸಂಭವಿಸುವ ಮೊದಲೇ ಕಿನ್ನಿಗೋಳಿ ಮೆಸ್ಕಾಂ ಇಲಾಖೆ ಎಚ್ಚೆತ್ತು ಸರಿಪಡಿಸಬೇಕು ಎಂದು ಸ್ಥಳೀಯರಾದ ನೆಲ್ಸನ್ ಲೋಬೋ ಒತ್ತಾಯಿಸಿದ್ದಾರೆ.
Kshetra Samachara
06/08/2022 05:00 pm