ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ರಾಜ್ಯ ಹೆದ್ದಾರಿ ಅಪಾಯಕಾರಿ ಹೊಂಡದ ಬೀಡು; ಸವಾರರಿಗೆ ನಿತ್ಯ ಕಸರತ್ತು!

ಬಜಪೆ: ಕಟೀಲು- ಬಜಪೆ ರಾಜ್ಯ ಹೆದ್ದಾರಿಯ ಕಟೀಲು ಸೇತುವೆ ಅಂಚಿನಲ್ಲಿ ಬೃಹತ್ ಗಾತ್ರದ ಹೊಂಡ ಉಂಟಾಗಿದ್ದು, ಹೆದ್ದಾರಿ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಕಟೀಲು - ಬಜಪೆ ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದೆ. ಪ್ರಸಿದ್ದ ಕ್ಷೇತ್ರ ಕಟೀಲು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆ ಇದಾಗಿದೆ.

ಮೂಲ್ಕಿ, ಕಿನ್ನಿಗೋಳಿ, ಬೆಳ್ಮಣ್ ಹಾಗೂ ಇನ್ನಿತರ ಕಡೆಗಳಿಂದ ಬಜಪೆ ಕಡೆಗೆ ಸಾಗಬೇಕಾದರೆ ಈ ಹೆದ್ದಾರಿ ಮೂಲಕವೇ ಸಂಚರಿಸಬೇಕು. ಹೊಂಡದಲ್ಲೀಗ ಮಳೆನೀರು ತುಂಬಿ ಹೋಗಿದ್ದು, ಹೊಂಡವೇ ಗೋಚರಿಸುತ್ತಿಲ್ಲ. ಘನ ವಾಹನಗಳು ಕಸರತ್ತು ಮಾಡಿಯಾದರೂ ಸಂಚರಿಸುತ್ತದೆ. ಆದರೆ, ದ್ವಿಚಕ್ರ ವಾಹನ ಸವಾರರ ಪಾಡು ಬಲು ಬೇಜಾರು. ಹೆದ್ದಾರಿ ಇಲಾಖೆ ಅತಿ ಶೀಘ್ರ ಈ ಅಪಾಯಕಾರಿ ಹೊಂಡ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

09/07/2022 10:58 pm

Cinque Terre

8.1 K

Cinque Terre

0

ಸಂಬಂಧಿತ ಸುದ್ದಿ