ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಾಲುಸಂಕ ಕಾಮಗಾರಿಗೆ ಮೀನಮೇಷ; ದಿನನಿತ್ಯ ಸಂಚಾರ ಸಂಕಷ್ಟ

ಕಾಪು: ಬೃಹತ್ ಮೊತ್ತದ ಕಾಮಗಾರಿಗಳು ಯಾವುದೇ ಅಭ್ಯಂತರವಿಲ್ಲದೆ ಸ್ಥಳೀಯಾಡಳಿತಗಳಲ್ಲಿ ಅನುಷ್ಠಾನಗೊಳ್ಳುತ್ತದೆ. ಆದರೆ, ಕನಿಷ್ಠ ಮೊತ್ತದ ಕಾಮಗಾರಿ ಸೂಕ್ತ ಸಮಯದಲ್ಲಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇರುತ್ತಾರೆ.ಹೌದು, ಇದಕ್ಕೆ ಸಾಕ್ಷಿಯೆಂಬಂತೆ ಕಾಪು ತಾಲೂಕಿನ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಂತೂರು ಸಾಗುಮನೆ ಬಳಿಯ ಕಾಲುಸಂಕ ವಿಳಂಬ ಕಾಮಗಾರಿ.

ಸಾಂತೂರು ಸಾಗುಮನೆಯ ಕೊಳಕೆಮಾರು ಬಳಿ ಮಳೆನೀರು ಹರಿದು ಹೋಗುವ ತೋಡಿಗೆ ಕಾಲುಸಂಕ ನಿರ್ಮಿಸದ ಕಾರಣ ಶಾಲಾ ಮಕ್ಕಳು, ಕೃಷಿಕರು ಭಾರಿ ಕಷ್ಟದಿಂದ ತೋಡು ದಾಟುತ್ತಿದ್ದಾರೆ.ಕೃಷಿ ಚಟುವಟಿಕೆಯೇ ಪ್ರಧಾನವಾಗಿರುವ ಈ ಭಾಗದ ಜನರಿಗೆ ರಸ್ತೆ ಸಂಪರ್ಕವಿದೆ. ಆದರೆ, ಸುತ್ತುಬಳಸಿ ತೆರಳಬೇಕಾದ ಕಾರಣ ಹತ್ತಿರದ ದಾರಿಯಾಗಿ ಈ ತೋಡು ಬಳಸಿಯೇ ಸಂಚರಿಸುತ್ತಿದ್ದಾರೆ. ಮೇ ತಿಂಗಳಿನಿಂದ ಜನವರಿವರೆಗೆ ಈ ತೋಡಿನಲ್ಲಿ ನೀರು ತುಂಬಿರುವುದರಿಂದ ಅವರ ಸಂಕಷ್ಟ ಹೇಳತೀರದು.

ನೆರೆ ಬಂದರೆ ಮಕ್ಕಳಿಗೆ ಇಲ್ಲಿ ನಡೆದಾಡಲು ಬಲು ಕಷ್ಟ. ಇಂತಹ ಸಂದರ್ಭ ಹೆತ್ತವರೇ ಬಂದು ಮಕ್ಕಳನ್ನು ದಾಟಿಸಬೇಕಾಗಿದೆ. ಕೃಷಿಕರೇ ಹೆಚ್ಚಾಗಿರುವ ಈ ಭಾಗದ ಜನರು ಹಾಲು ಕೊಂಡೊಯ್ಯಲೂ ಇದೇ ಮಾರ್ಗ ಬಳಸುತ್ತಾರೆ.ಸ್ಥಳೀಯಾಡಳಿತ ಇಲ್ಲಿ ಕಾಲುಸಂಕ ನಿರ್ಮಿಸಲು ಹಲವು ಬಾರಿ ಕ್ರಿಯಾ ಯೋಜನೆ ರೂಪಿಸಿತ್ತು. ಕಡಿಮೆ ಮೊತ್ತದ ಕಾಮಗಾರಿಯಾಗಿದ್ದ ಕಾರಣ ಉದಾಸೀನ ಎದ್ದು ಕಾಣುತ್ತಿದೆ. ಈ ಬಾರಿಯೂ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಜೋಡಿಸಲಾಗಿದೆ. ಆದರೆ, ಕಾಮಗಾರಿ ಮಾತ್ರ ನಡೆದಿಲ್ಲ. ಮತ್ತೆ ಮಳೆಗಾಲ ಮುಗಿಯುವವರೆಗೆ ಕಾಯಬೇಕಿದೆ.

Edited By : Manjunath H D
Kshetra Samachara

Kshetra Samachara

05/06/2022 02:33 pm

Cinque Terre

17.01 K

Cinque Terre

0

ಸಂಬಂಧಿತ ಸುದ್ದಿ