ಮುಲ್ಕಿ: ಬಪ್ಪನಾಡು ಏಳಿಂಜೆ ಲೋಕೋಪಯೋಗಿ ರಸ್ತೆಯ ಕುಕ್ಕಿಕಟ್ಟೆ ಜಂಕ್ಷನ್ ಬಳಿಯಿಂದ ಕೊಲ್ಲೂರು ಪದವು ವರೆಗಿನ ಸುಮಾರು 3.5 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರು ಅರೆಬರೆ ಕಾಮಗಾರಿ ನಡೆಸಿ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ.
ಕಳೆದ ಕೆಲ ತಿಂಗಳ ನಡೆದ ಕುಕ್ಕಿಕಟ್ಟೆ ಜಂಕ್ಷನ್ ಬಳಿಯಿಂದ ನೂತನ ಕಾಮಗಾರಿಯ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳು ಬಿಟ್ಟಿದ್ದು ತೇಪೆ ಹಾಕಲಾಗಿದೆ. ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ಕೃತಕ ನೆರೆ ಭೀತಿ ಎದುರಾಗಿದೆ.
ಸ್ಥಳೀಯರಾದ ವಕೀಲ ಬಿಪಿನ್ ಪ್ರಸಾದ್ ಮಾತನಾಡಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆ ನೀರಿನ ರಭಸಕ್ಕೆ ಮನೆಯ ಆವರಣಗೋಡೆ ಬಿರುಕು ಬಿಟ್ಟಿದೆ. ಮುಂದಿನ ಮಳೆಗಾಲದ ಮೊದಲು ಚರಂಡಿ ಕಾಮಗಾರಿ ನಡೆಸದಿದ್ದರೆ ಆವರಣ ಗೋಡೆ ಕುಸಿತ ಹಾಗೂ ನೂತನ ಕಾಂಕ್ರೀಟ್ ರಸ್ತೆ ನಾಶವಾಗುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಶಾಸಕರು ಮಧ್ಯಪ್ರವೇಶಿಸಿ ರಸ್ತೆ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
27/05/2022 03:18 pm