ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಹಳೆಯಂಗಡಿ ಬಸ್ಸು ನಿಲ್ದಾಣದ ಬಳಿ ಮಾತಾ ರೆಸಿಡೆನ್ಸಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಾತ್ರೋರಾತ್ರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯಲ್ಲಿ ಹರಿಯುತ್ತಿದ್ದು ಮುಗಿಯದ ಗೋಳಾಗಿ ಪರಿಣಮಿಸಿದೆ ಎಂದು ಸ್ಥಳೀಯ ಅಂಗಡಿ ಮಾಲೀಕರಾದ ಪ್ರವೀಣ್ ಕುಮಾರ್ ರಾಮಚಂದ್ರ ಶೆಟ್ಟಿಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ದಿನದ ಹಿಂದೆ ತೆರೆದ ರೀತಿಯಲ್ಲಿ ಕಟ್ಟಡದ ತ್ಯಾಜ್ಯನೀರನ್ನು ಹೆದ್ದಾರಿ ಬದಿ ಬಹುಮಹಡಿ ಕಟ್ಟಡದ ಮಾಲೀಕರು ಬಿಡುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಹಳೆಯಂಗಡಿ ಗ್ರಾ ಪಂ ಅಧ್ಯಕ್ಷರು ಸಹಿತ ಸದಸ್ಯರು ಕಾರ್ಯಾಚರಣೆ ನಡೆಸಿ ಮಾತಾ ರೆಸಿಡೆನ್ಸಿ ಬಹುಮಹಡಿ ಕಟ್ಟಡದ ಮಾಲೀಕರನ್ನು ಸ್ಥಳಕ್ಕೆ ಬರಹೇಳಿದ್ದರೂ ನಿರ್ಲಕ್ಷ ವಹಿಸಿದ್ದು ಅಧ್ಯಕ್ಷರು ಕಾರ್ಯಾಚರಣೆ ನಡೆಸಿ ಹೆದ್ದಾರಿ ಬದಿಯ ಅನಧಿಕೃತ ಚರಂಡಿ ಮುಚ್ಚಿಸಿದ್ದರು.
ಇದೀಗ ರಾತ್ರೋರಾತ್ರಿ ಕಟ್ಟಡದ ಮಾಲೀಕರು ಹೆದ್ದಾರಿ ಬದಿಯಲ್ಲಿ ಕಟ್ಟಡದ ತ್ಯಾಜ್ಯನೀರು ಬಿಡುತ್ತಿದ್ದು ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ರೋಗದ ಭೀತಿ ಎದುರಾಗಿದೆ ಕೂಡಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
15/04/2022 12:45 pm