ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ : ಕೊನೆಗೂ ನೆಟ್ ವರ್ಕ್ ಸಮಸ್ಯೆಗೆ ಸಿಕ್ತು ಮುಕ್ತಿ, ಜಕ್ರಿಬೆಟ್ಟಿನಲ್ಲಿ ಟವರ್ ಅನುಷ್ಠಾನ

ಪಬ್ಲಿಕ್ ನೆಕ್ಸ್ಟ್ ಫಾಲೋಅಪ್

ಬಂಟ್ವಾಳ: ಬಂಟ್ವಾಳದಿಂದ ಸ್ವಲ್ಪ ದೂರದಲ್ಲಿರುವ ಜಕ್ರಿಬೆಟ್ಟು, ಚಂಡ್ತಿಮಾರ್, ಮಣಿಹಳ್ಳ ಭಾಗದ ನೆಟ್‌ವರ್ಕ್ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದ್ದು, ಏರ್ ಟೆಲ್ ಸಂಸ್ಥೆ ಜಕ್ರಿಬೆಟ್ಟಿನಲ್ಲಿ ಟವರ್‌ವೊಂದನ್ನು ಅನುಷ್ಠಾನಿಸಿದೆ. ಈಗಾಗಲೇ ಟವರ್ ಪ್ರಾಯೋಗಿಕ ಕಾರ್ಯ ಆರಂಭಿಸಿದ್ದು, ಮಾ.12ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಸಮಸ್ಯೆ ಕುರಿತು ಪಬ್ಲಿಕ್ ನೆಕ್ಸ್ಟ್ ಕಳೆದ ವರ್ಷ ವರದಿ ಪ್ರಕಟಗೊಳಿಸಿತ್ತು.

ಜಕ್ರಿಬೆಟ್ಟು-ಚಂಡ್ತಿಮಾರ್ ಭಾಗದ ಜನ ನೆಟ್‌ವರ್ಕ್ ಸಮಸ್ಯೆ ಅನುಭವಿಸುತ್ತಿರುವ ಪರಿಣಾಮ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗಾಗಿ ನೆಟ್‌ವರ್ಕ್ ಹುಡುಕಿಕೊಂಡು ನೇತ್ರಾವತಿ ನದಿ ಕಿನಾರೆಗೆ ಹೋಗಬೇಕಾದ ಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳು ಈ ರೀತಿ ನದಿ ಬದಿಗೆ ಹೋಗುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯ ಕುರಿತು ವರದಿ ಪ್ರಕಟವಾಗಿತ್ತು. ಇದೀಗ ಏರ್‌ಟೆಲ್ ಕಂಪನಿ ಜಕ್ರಿಬೆಟ್ಟುನ ಖಾಸಗಿ ಜಮೀನೊಂದರಲ್ಲಿ ಟವರ್‌ವೊಂದನ್ನು ಅನುಷ್ಠಾನಿಸಿದೆ. ಪ್ರಸ್ತುತ ಆ ಭಾಗದ ಜನರಿಗೆ ಮನೆಯ ಒಳಗೆ ಕೂತರೂ ವೇಗವಾಗಿ ನೆಟ್‌ವರ್ಕ್ ಸಿಗುತ್ತಿದೆ. ಈ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

11/03/2022 02:55 pm

Cinque Terre

74.92 K

Cinque Terre

0

ಸಂಬಂಧಿತ ಸುದ್ದಿ