ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿ ಮತ್ತೆ ಶುರು

ಕಾಪು: ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪುನಃ ಆರಂಭಗೊಂಡಿದೆ. ಇತ್ತೀಚೆಗೆ ವಾಹನ, ಜನದಟ್ಟಣೆ ಹೆಚ್ಚುತ್ತಿದ್ದು, ಕೆಲವು ರಸ್ತೆಗಳನ್ನು ಅನಿವಾರ್ಯವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗಲೀಕರಣ ಮಾಡಲಾಗುತ್ತಿದೆ.

ಅದರಂತೆ ಒಂದೂವರೆ ವರ್ಷ ಹಿಂದೆ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೋರಿ ನಿರ್ಮಿಸಿ, ರಸ್ತೆ ಇಕ್ಕೆಲ ಅಗೆದು ಜಲ್ಲಿ ತುಂಬಿದ ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿಗೆ ಮತ್ತೆ ಚಾಲನೆ ನೀಡುವ ಮೂಲಕ ಜನ ನಿಟ್ಟುಸಿರು ಬಿಡುವಂತಾಗಿದೆ.

ಈ ಬಗ್ಗೆ ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಈಗಾಗಲೇ ಬೆಳಪುವಿನಲ್ಲಿ ಕೈಗಾರಿಕೆ ಪಾರ್ಕ್, ಅತ್ಯಾಧುನಿಕ ವಿಜ್ಞಾನ ಸಂಶೋಧನೆ ಕೇಂದ್ರ, ಪಾಲಿಟೆಕ್ನಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ಅದಕ್ಕೆ ಪೂರಕವಾಗಿ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಡಳಿತಾವಧಿಯಲ್ಲಿ 9 ಮೀ. ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ. ಮಂಜೂರಾಗಿತ್ತು.

ಇದೀಗ ಲಾಲಾಜಿ ಮೆಂಡನ್ ಶಾಸಕರಾದ ಬಳಿಕ ಮರು ಟೆಂಡರ್ ಕರೆಯಲಾಗಿದ್ದು, ರಸ್ತೆ ಅಗಲೀಕರಣದೊಂದಿಗೆ ಚರಂಡಿ, ಮೋರಿ ನಿರ್ಮಾಣ ನಡೆಯಲಿದೆ. ಶೀಘ್ರ ರಸ್ತೆ ಕಾಮಗಾರಿ ಪೂರ್ತಿಗೊಳಿಸಲು ಗುತ್ತಿದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

02/02/2022 09:04 pm

Cinque Terre

7.81 K

Cinque Terre

3

ಸಂಬಂಧಿತ ಸುದ್ದಿ