ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು: ಕೊರೊನಾ ಜಾಗೃತಿ ಜೊತೆಗೆ ಸಹಾಯಹಸ್ತ ಮೂಲಮಂತ್ರವಾಗಲಿ:ರವಿ ಗೌಡ

ಮುಲ್ಕಿ: ಮುಲ್ಕಿ ವಲಯ ಪಡುಪಣಂಬೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರ ದ ಪದ್ಮಶ್ರೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವು ಕೆರೆಕಾಡು ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯ ಕ್ರಮದ ಅದ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ಗಣೇಶ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಬಜಪೆಯ ಯೋಜನಾಧಿಕಾರಿ ರವಿ ಗೌಡ ಮಾತನಾಡಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಸಂಘಟನೆಯ ವತಿಯಿಂದ ಅನೇಕ ಸಹಾಯಹಸ್ತ ಗಳನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಂಘಟನೆಯ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಜಾಗೃತಿ ಸದಸ್ಯರಾದ ವಿನೋದ ಎಸ್ ಸಾಲ್ಯಾನ್ , ಲಲಿತ ಬಾಸ್ಕರ್ , ಕರುಣಕರ ಶೆಟ್ಟಿಗಾರ್, ಉಪಸಂಯೋಜಕಿ ಗಾಯತ್ರಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನಯ, ಸೇವಾಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು, ಗೀತಾ ವಿ ಕೋಟ್ಯಾನ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

15/01/2022 10:50 am

Cinque Terre

3.53 K

Cinque Terre

0

ಸಂಬಂಧಿತ ಸುದ್ದಿ