ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಬಂದ್‌ ಗೆ ಅವಕಾಶ ನೀಡದಿರಿ; ಪೊಲೀಸರಿಗೆ ಎಸ್ ಡಿಪಿಐ ಮನವಿ

ವಿಟ್ಲ: ಸಾಲೆತ್ತೂರಿನಲ್ಲಿ ಮೊನ್ನೆ ನಡೆದ ಘಟನೆಯನ್ನು ನೆಪವಾಗಿಸಿಕೊಂಡು ಹಿಂದೂ ಜಾಗರಣ ವೇದಿಕೆ ಜ.11ರಂದು ʼವಿಟ್ಲ ಬಂದ್ʼ ಗೆ ಕರೆ ನೀಡಿದ್ದು, ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಕೂಡಿದ ಈ ಬಂದ್‌ ನಿಂದ ನಾಗರಿಕರಿಗೆ ಆಗುವ ಕಷ್ಟ-ಸಂಕಷ್ಟವನ್ನು ತಪ್ಪಿಸಲು ಪೊಲೀಸ್ ಇಲಾಖೆ ಬಂದ್ ಗೆ ಅವಕಾಶ ನೀಡಬಾರದು ಎಂದು ಇಂದು ಎಸ್ ಡಿಪಿ ಐ ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ SDPI ಬಂಟ್ವಾಳ ವಿಧಾನಸಭೆ ಸಮಿತಿ ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, SDPI ಪುತ್ತೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅನ್ವರ್ ಪೆರುವಾಯಿ, ಸದಸ್ಯ ರಹೀಮ್ ಕಂಬಳಬೆಟ್ಟು , ಬ್ಲಾಕ್ ಸಮಿತಿ ಕಾರ್ಯದರ್ಶಿ ಮುನೀರ್ ಎಂ.ಕೆ., ವಿಟ್ಲ ಪಟ್ಟಣ ಸಮಿತಿ ಕಾರ್ಯದರ್ಶಿ ಸಿರಾಜ್ ಕಡಂಬು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

10/01/2022 05:36 pm

Cinque Terre

6.65 K

Cinque Terre

1

ಸಂಬಂಧಿತ ಸುದ್ದಿ