ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:" ಸಬ್ಸಿಡಿ ದರದ ಸೀಮೆ ಎಣ್ಣೆಯನ್ನು ತಕ್ಷಣ ಬಿಡುಗಡೆ ಮಾಡಿ " ಮೀನುಗಾರರಿಂದ ಸುದ್ದಿಗೋಷ್ಠಿ

ಉಡುಪಿ: ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿಕೊಂಡು ಬರುತ್ತಿರುವ ಮೀನುಗಾರರು ಕಷ್ಟಜೀವಿಗಳು, ಶ್ರಮಜೀವಿಗಳು. ಸಾಂಪ್ರದಾಯಿಕ ಮೀನುಗಾರಿಕೆ ವರ್ಷದಿಂದ ವರ್ಷಕ್ಕೆ ನಶಿಸಿಕೊಂಡು ಬರುತ್ತಿದೆ. ಸರಕಾರದಿಂದ ಹಲವು ವರ್ಷಗಳಿಂದ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ನಿರಂತರವಾಗಿ ಆಹಾರ ಇಲಾಖೆಯ ಮೂಲಕ ನೀಡಲಾಗುತ್ತಿದೆ.

ಸರಕಾರದ ಆದೇಶ ದಿನಾಂಕ: 23-10 2013 ರಂತೆ ಮೀನುಗಾರಿಕಾ ದೋಣಿಗಳಿಗೆ ನೀಡಲಾಗುವ ಸಬ್ಸಿಡಿ ರಹಿತ ಸೀಮೆ ಎಣ್ಣೆಯನ್ನು ಕೇವಲ 4,514 ದೋಣಿಗಳಿಗೆ ತಲಾ 300ಲೀ. ನಂತೆ ಮಾಸಿಕ ಒಟ್ಟು 1,355 ಕಿ. ಲೀ. ನಂತೆ ಕರಾವಳಿಯ ಮೂರು ಜಿಲ್ಲೆಗಳ ನಾಡದೋಣಿ ಮೀನುಗಾರರಿಗೆ ಸಹಾಯಧನ ರಹಿತ ಸೀಮೆ ಎಣ್ಣೆ ನೀಡಲಾಗುತ್ತಿದೆ. ಪ್ರಸ್ತುತ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸುಮಾರು 10,100ಕ್ಕಿಂತಲೂ ಹೆಚ್ಚಿನ ದೋಣಿಗಳು ಇಂಜಿನ್ ಹೊಂದಿರುತ್ತದೆ. ಈ ದೋಣಿಗಳಿಗೆ ತಲಾ 300ಲೀ. ನಂತೆ ವಾರ್ಷಿಕ 30,300ಕಿ.ಲೀ. ಸೀಮೆಎಣ್ಣೆಯ ಅಗತ್ಯವಿದೆ.

2021-22ನೇ ಸಾಲಿಗೆ 12,195 ಕೆ.ಎಲ್ ಸೀಮೆ ಎಣ್ಣೆ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಸರಕಾರದಿಂದ ಕೇವಲ 7,080 ಕೆ. ಎಲ್. ಸಹಾಯಧನ ರಹಿತ ಸೀಮೆಎಣ್ಣೆ ಬಿಡುಗಡೆಯಾಗಿದ್ದು ನವೆಂಬರ್ 2021ರ ವರೆಗೆ ಮೀನುಗಾರರಿಗೆ ಹಂಚಿಕೆಯಾಗಿರುತ್ತದೆ. ಡಿಸಂಬರ್ ತಿಂಗಳಿನಿಂದ ಮಾರ್ಚ್ 2022ರ ವರೆಗೆ ಕೇಂದ್ರ ಸರಕಾರದಿಂದ 5,115 ಕೆ.ಎಲ್ ಬಿಡುಗಡೆಯಾಗಬೇಕಿದ್ದು ಈವರೆಗೆ ಬಿಡುಗಡೆಯಾಗಿಲ್ಲ. ಆದರೆ ಕೇರಳ ಸರ್ಕಾರಕ್ಕೆ 2021-22ನೇ ಸಾಲಿನ 2ನೇ ಹಂತದ ಸಹಾಯಧನ ರಹಿತ ಸೀಮೆಎಣ್ಣೆಯನ್ನು ದಿನಾಂಕ 01-12-2011 ರಂದು 18,108 ಕೆ.ಎಲ್ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಬಿಡುಗಡೆಯಾಗಿಲ್ಲ.ತಕ್ಷಣ ಇದನ್ನು ನೀಡುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

06/01/2022 06:22 pm

Cinque Terre

5.37 K

Cinque Terre

1

ಸಂಬಂಧಿತ ಸುದ್ದಿ