ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ದಿನವಿಡೀ ಧೂಳು: ಇದು ಪರ್ಕಳ ರಸ್ತೆಯ ಗೋಳು

- ವರದಿ: ರಹೀಂ ಉಜಿರೆ

ಪರ್ಕಳ: ಪರ್ಕಳ ಮೂಲಕ ಹಾದು ಹೋಗುವ 169 'ಎ' ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.ಈ ಹಿಂದೆ ಭೂಸ್ವಾಧೀನದಲ್ಲಿ ವಿಳಂಬ,ಆಮೆಗತಿಯ ಕಾಮಗಾರಿ ಹೊಂಡಗಳಿಂದ ಕೂಡಿದ ರಸ್ರೆಯಿಂದ ಪರ್ಕಳ ಪೇಟೆ ಜನ ಬೇಸತ್ತಿದ್ದರು.ಈಗ ಇಡೀ ನಗರವೇ ಧೂಳುಮಯವಾಗಿದ್ದು ಊರವರು ಹೊಸ ಸಮಸ್ಯೆ ಎದುರಿಸುವಂತಾಗಿದೆ.

ಉಡುಪಿಯ ಪರ್ಕಳದ ಜನತೆಗೆ ಸಮಸ್ಯೆಗಳಿಂದ ಮುಕ್ತಿ ಕಾಣುವ ದಿನ ಇನ್ನೂ ಬಂದಂತಿಲ್ಲ.ಹಲವು ವರ್ಷಹಳಿಂದ ಇಲ್ಲಿ ' ರಾಷ್ಟ್ರೀಯ ಹೆದ್ದಾರಿ169 'ಎ ಒಂದಲ್ಲ ಒಂದು ಸಮಸ್ಯೆಯಿಂದ ಕೂಡಿತ್ತು.ನಗರದ ಇಕ್ಕಟ್ಟಾದ ರಸ್ತೆಯ ಎರಡೂ ಬದಿ ಭೂಸ್ವಾಧೀನ ಮಾಡುವಾಗಲೇ ಸಾಕುಬೇಕಾಗಿತ್ತು.ಕೆಲವರು ತಮ್ಮ ಜಾಗ ಬಿಟ್ಟುಕೊಡುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು.ಬಳಿಕ ಹಂತಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿಯಿತು.ಇದೀಗ ನಗರದಲ್ಲಿ ಚತುಷ್ಫತ ರಸ್ತೆಗಾಗಿ ಕಾಮಗಾರಿ ನಡೆಯುತ್ತಿದೆ.ಈ ಹಿಂದೆ ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ವರ್ಷಗಟ್ಟಲೇ ತೊಂದರೆಗೊಳಗಾಗಿದ್ದ ಜನರಿಗೆ ಈಗ ಇಡೀ ದಿನ ಧೂಳಿನಿಂದಾಗಿ ಹೈರಾಣಾಗಿದ್ದಾರೆ.

ಮೊದಲೇ ಪರ್ಕಳ ಹೆದ್ದಾರಿ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು.ಇದೀಗ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನಗರದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.ಒಂದೆಡೆ ರಸ್ತೆ ,ಇನ್ನೊಂದೆಡೆ ಮಣ್ಣಿನ ರಸ್ತೆ,ನಗರದ ಜನ ಯಾವುದರಲ್ಲಿ ಹೋಗಬೇಕೋ ಗೊತ್ತಾಗದೆ ಪರದಾಡುತ್ತಿದ್ದಾರೆ.ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಶಾಲೆಗೆ ಹೋಗುವ ಹೊತ್ತು ಮತ್ತು ಸಂಜೆ ಹೊತ್ತಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ.

ಇಲ್ಲಿ ಭೂಸ್ವಾಧೀನ ಆದವರ ಖಾತೆಗೆ ಪರಿಹಾರ ಹಣ ಇನ್ನೂ ಬಂದಿಲ್ಲ.ಈ ಮಧ್ಯೆ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆಯೋ ನಿಂತಿದೆಯೋ ಒಂದೂ ಗೊತ್ತಾಗಿತ್ತಿಲ್ಲ.ಸಂಬಂಧಪಟ್ಟವರು ಪರ್ಕಳ ನಿವಾಸಿಗರ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

Edited By : Shivu K
PublicNext

PublicNext

26/12/2021 12:01 pm

Cinque Terre

38.89 K

Cinque Terre

3

ಸಂಬಂಧಿತ ಸುದ್ದಿ