ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪಾದೂರಿನಲ್ಲಿ ಜೆಎಂಸಿ ಸರ್ವೇಗೆ ಸ್ಥಳೀಯರಿಂದ ತಡೆ; ವಾಪಸ್‌ ಹೋದ ಅಧಿಕಾರಿಗಳು

ಕಾಪು: ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದ ISPRL 2ನೇ ಹಂತದ ಯೋಜನೆಯ 210 ಎಕ್ರೆ ಭೂ ಸ್ವಾಧೀನ ಪ್ರಕ್ರಿಯೆ ಹಲವು ತಿಂಗಳ ಹಿಂದೆ ಆರಂಭಗೊಂಡಿದ್ದು, ಈ ಬಗ್ಗೆ ಭೂ ಸಂತ್ರಸ್ತರು ಪಾದೂರು ಗ್ರಾಮದ ಭೂಮಿಯ ಮೌಲ್ಯ ಕಡಿಮೆ ಇರುವುದರಿಂದ ಪಕ್ಕದ ಗ್ರಾಮದ ಭೂಮಿಯ ಮೌಲ್ಯ ಪರಿಗಣಿಸಿ ಜೆಎಂಸಿ ಸರ್ವೇಗಿಂತ ಮೊದಲು ಜಾಗದ ಮೌಲ್ಯ ನಿಗದಿ ಪಡಿಸಿದ ನಂತರ ಜೆಎಂಸಿ ಸರ್ವೇ

ನಡೆಸಬೇಕೆಂದು ಆಗ್ರಹಿಸುತ್ತಾ ಬಂದಿದ್ದರು.

ಈ ಬಗ್ಗೆ ಸ್ಥಳೀಯ ಶಾಸಕ ಲಾಲಾಜಿ ಆರ್. ಮೆಂಡನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಥಳೀಯ ಜನಪ್ರತಿನಿಧಿಗಳು, ಜನಜಾಗೃತಿ ಮತ್ತು ಜನಹಿತ ಸಮಿತಿ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ, ಮನವಿಗಳನ್ನು ನೀಡಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಸಭೆ ನಡೆಸುವ ಬಗ್ಗೆ ಭರವಸೆಯನ್ನೂ ನೀಡಿದ್ದರು.

ಆದರೆ, ಇಂದು KIADB ಅಧಿಕಾರಿಗಳು ಏಕಾಏಕಿ ಗ್ರಾಪಂ ಹಾಗೂ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡದೆ ಸರ್ವೇ ಆರಂಭಿಸಿದ್ದನ್ನು ಕಂಡು ಗ್ರಾಮಸ್ಥರು, ಸರ್ವೇ ಕಾರ್ಯಕ್ಕೆ ತಡೆಯೊಡ್ಡಿ KIADB ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ. ಮಜೂರು ಗ್ರಾಪಂ ಉಪಾಧ್ಯಕ್ಷ ಮಧುಸೂದನ್ ಸಾಲ್ಯಾನ್, ಸದಸ್ಯರಾದ ಸಂದೀಪ್ ರಾವ್, ಪ್ರಸಾದ್ ಶೆಟ್ಟಿ ವಳದೂರು, ಜನಹಿತ ಸಮಿತಿ ಅಧ್ಯಕ್ಷ ಸುರೇಂದ್ರ ಜೈನ್ , ಸದಸ್ಯರಾದ ಮೇವಿಸ್ ಕೋರ್ಡ , ಮೇಬುಲ್ ಕೋರ್ಡ, ಪ್ರಶಾಂತ್ ರಾವ್, ರಾಘವೇಂದ್ರ ಆಚಾರ್ಯ , ರಿಚರ್ಡ್ ಕೋರ್ಡ, ಸ್ಥಳೀಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

21/12/2021 08:23 pm

Cinque Terre

14.85 K

Cinque Terre

0

ಸಂಬಂಧಿತ ಸುದ್ದಿ