ಸುಳ್ಯ: ತನ್ನ ವ್ಯಾಪ್ತಿಗೆ ಬರುವ ಪ್ರತಿ ವ್ಯವಸ್ಥೆಯನ್ನೂ ಗಮನಿಸುವುದು ಆಯಾಯ ಸ್ಥಳೀಯಾಡಳಿತದ ಜವಾಬ್ದಾರಿ. ಆದರೆ, ಈ ಕರ್ತವ್ಯವನ್ನು ಎಷ್ಟು ಸ್ಥಳೀಯಾಡಳಿತ ಪ್ರಾಮಾಣಿಕವಾಗಿ ನಿಭಾಯಿಸುತ್ತಿವೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
ಇಲ್ಲೊಂದು ಪಂಚಾಯಿತಿ ಪ್ರತಿಯೊಂದು ಚಟುವಟಿಕೆಯನ್ನು 3ನೇ ಕಣ್ಣಿನಿಂದ ಕಾವಲು ಕಾಯುತ್ತಿದೆ! ಹೌದು, ರಾಜ್ಯದ ಕೆಲವೇ ಕೆಲವು ಮಾದರಿ ಗ್ರಾಪಂ ಗಳಲ್ಲಿ ದ.ಕ. ಜಿಲ್ಲೆ ಸುಳ್ಯ ತಾಲೂಕಿನ ಸಂಪಾಜೆ ಕೂಡ ಒಂದು.
ಕೇಂದ್ರ ಸರಕಾರದ ನಾನಾ ಯೋಜನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಈ ಗ್ರಾಪಂ ತನ್ನ ವ್ಯಾಪ್ತಿಗೆ ಬರುವ ಕಲ್ಲುಗುಂಡಿ, ಸಂಪಾಜೆ ಪೇಟೆಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಲ್ಲ ಚಲನವಲನ ನಿಯಂತ್ರಿಸುತ್ತಿದೆ.
ಇದರಿಂದಾಗಿ ಯಾವುದೇ ಅಹಿತಕರ ಘಟನೆ ನಡೆದರೂ ತಕ್ಷಣ ಆ ಬಗ್ಗೆ ಮಾಹಿತಿ ಪಡೆಯುವ ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಹಕಾರಿಯಾಗುವ ಸಾಕ್ಷಿಗಳನ್ನೂ ಗ್ರಾಪಂ ಪಡೆದುಕೊಳ್ಳುತ್ತದೆ. 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಗ್ರಾಪಂ, ಸಿಸಿ ಕ್ಯಾಮೆರಾ ಅಳವಡಿಸಿದ್ದು, ಎಲ್ಲ ಆಗುಹೋಗುಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ.
Kshetra Samachara
13/12/2021 02:16 pm