ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಪದ್ಮನೂರು ತಿರುವಿನಲ್ಲಿ ಕಳೆದ ಕೆಲ ತಿಂಗಳಿನಿಂದ ಅಪಾಯಕಾರಿ ಹೊಂಡ ಉಂಟಾಗಿದ್ದು ಬಲಿಗಾಗಿ ಕಾಯುತ್ತಿದೆ.
ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಪದ್ಮನೂರು ತಿರುವಿನಲ್ಲಿ ಕಳೆದ ಮಳೆಗಾಲದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೊಂಡ ಉಂಟಾಗಿದ್ದು ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸಹಿತ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂದರ್ಭ ಕೂಡಲೇ ಎಚ್ಚೆತ್ತ ಅಧಿಕಾರಿಗಳು ತಾತ್ಕಾಲಿಕ ನೆಲೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿದ್ದು ಬಾರಿ ಮಳೆಗೆ ಮತ್ತೆ ಕೊಚ್ಚಿಹೋಗಿ ಅಪಾಯಕಾರಿ ಹೊಂಡ ಉಂಟಾಗಿದೆ.
ಅಪಾಯಕಾರಿ ಹೊಂಡದಿಂದ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು,ಭಾನುವಾರ ಬೈಕ್ ಸವಾರ ಹೊಂಡಕ್ಕೆ ಬಿದ್ದು ತೀವ್ರ ಗಾಯಗೊಂಡ ಘಟನೆ ನಡೆದಿದೆ. ಬಳಿಕ ಸ್ಥಳೀಯರು ವಾಹನ ಸವಾರರನ್ನು ಎಚ್ಚರಿಸಲು ಪ್ಲಾಸ್ಟಿಕ್ ಟಬ್ ಮತ್ತು ಗಿಡಗಳನ್ನು ಇಟ್ಟಿದ್ದಾರೆ.
ಕೂಡಲೇ ಹೆದ್ದಾರಿ ಇಲಾಖೆ ಎಚ್ಚೆತ್ತು ಅಪಾಯಕಾರಿ ಕುಂಡಗಳನ್ನು ಮುಚ್ಚಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜೀವನ್ ಅಂಗರಗುಡ್ಡೆ ಒತ್ತಾಯಿಸಿದ್ದಾರೆ.
Kshetra Samachara
06/12/2021 11:42 am