ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಅರ್ಧಂಬರ್ಧ ಕಸ ತ್ಯಾಜ್ಯ ವಿಲೇವಾರಿ ಗ್ರಾಮಸ್ಥರ ಆಕ್ರೋಶ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದು ಕಳೆದ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ದುಷ್ಕರ್ಮಿಗಳು ಬಿಸಾಡಿದ್ದ ತ್ಯಾಜ್ಯವನ್ನು ತರಾತುರಿಯಲ್ಲಿ ವಿಲೇವಾರಿ ಮಾಡಿದ್ದು ಅನೇಕ ಸಂಶಯಗಳಿಗೆ ಕಾರಣವಾಗಿದೆ

ಹಳೆಯಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ಕಸ ವಿಲೇವಾರಿ ಘಟಕ ಮತ್ತು ಕಸ ವಿಲೇವಾರಿಗೆ ವಾಹನ ಮಂಜೂರಾಗಿ ಕೆಲ ತಿಂಗಳು ಕಳೆದರೂ ಕಸವಿಲೇವಾರಿಗೆ ಯಾವುದೇ ಆಸಕ್ತಿ ತೋರಿಸದ ಪಂಚಾಯತಿ ವಿರುದ್ಧ ಪಂಚಾಯತ್ ಆಡಳಿತದ ವಿಪಕ್ಷವು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿಪಕ್ಷದ ಪ್ರತಿಭಟನೆ ಬಗ್ಗೆ ಎಚ್ಚೆತ್ತುಕೊಂಡ ಪಂಚಾಯತ್ ಆಡಳಿತ ಪಕ್ಷವು ಏಕಾಏಕಿ ತರಾತುರಿಯಲ್ಲಿ ಹೆದ್ದಾರಿ ಬದಿಯ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ.

ಆದರೆ ಪಂಚಾಯತ್ ವ್ಯಾಪ್ತಿಯ ಸಾಗ್ ರಸ್ತೆಬದಿಯಲ್ಲಿ ತುಂಬಿ ತುಳುಕುತ್ತಿರುವ ತ್ಯಾಜ್ಯವನ್ನು ಹಾಗೇ ಬಿಟ್ಟಿದ್ದಾರೆ.

ಆದರೆ ಸಂಗ್ರಹ ಮಾಡಿದ ಕಸವನ್ನು ವೈಜ್ಞಾನಿಕವಾಗಿ ಘಟಕದಲ್ಲಿ ವಿಲೇವಾರಿ ಮಾಡದೆ, ಹತ್ತಿರದಲ್ಲಿರುವ ದೊಡ್ಡ ಗುಂಡಿಗಳಿಗೆ ಎರ್ರಾಬಿರ್ರಿಯಾಗಿ ಎಸೆದಿರುವ ಬಗ್ಗೆ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

08/11/2021 08:21 pm

Cinque Terre

21.98 K

Cinque Terre

0

ಸಂಬಂಧಿತ ಸುದ್ದಿ