ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಚರಂಡಿ ಅವ್ಯವಸ್ಥೆ, ರಸ್ತೆಯಲ್ಲಿ ಹರಿಯುತ್ತಿದೆ ಕೆಸರು ನೀರು

ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಶನೇಶ್ವರ ದೇವಸ್ಥಾನ, ಮುಲ್ಕಿ ಅರಮನೆ ಮೂಲಕ ಹಾದುಹೋಗುವ ಪಡುತೋಟ ಹೊಯಿಗೆ ಗುಡ್ಡೆ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಕೆಸರು ನೀರು ಹರಿಯುತ್ತಿದ್ದು ಅವ್ಯವಸ್ಥೆಗಳ ಆಗರವಾಗಿದೆ.

ಶನೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ರಸ್ತೆ ಅಂಚಿನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಭಾರಿ ಗಾತ್ರದ ಹೊಂಡಗಳು ಉಂಟಾಗಿದ್ದು ದ್ವಿಚಕ್ರ ವಾಹನಗಳಿಗೆ ಸಂಚರಿಸಲು ಸವಾಲಾಗಿ ಪರಿಣಮಿಸಿದೆ.

ಅದೇ ರೀತಿ ಮುಲ್ಕಿ ಅರಮನೆಯ ಎದುರು ಭಾಗದಲ್ಲಿ ಬ್ರಹದಾಕಾರದ ಹೊಂಡಗಳು ಉಂಟಾಗಿದ್ದು ರಸ್ತೆಯಲ್ಲಿ ಕೆಸರು ನೀರು ನಿಂತು ಪಾದಚಾರಿಗಳಿಗೆ ಪುಕ್ಕಟೆ ಕೆಸರು ನೀರಿನ ಸಿಂಚನವಾಗುತ್ತಿದೆ.

ಅರಮನೆ ಸಮೀಪವೇ ಕಿರು ಮೋರಿ ಅವ್ಯವಸ್ಥೆಗಳ ಆಗರವಾಗಿದ್ದು ಖಾಸಗಿ ಮನೆಗಳ ನೀರು ರಸ್ತೆಯಲ್ಲಿ ಹರಿದು ಕಸದ ಕೊಂಪೆಯಾಗಿದೆ.

ಚರಂಡಿ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಪಡು ಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರೂ ಇದುವರೆಗೂ ಸಮರ್ಪಕ ಕಾಮಗಾರಿ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ದ್ದಾರೆ.

Edited By : Shivu K
Kshetra Samachara

Kshetra Samachara

18/10/2021 03:33 pm

Cinque Terre

5.81 K

Cinque Terre

0

ಸಂಬಂಧಿತ ಸುದ್ದಿ