ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಕಳಪೆ ಕಾಂಕ್ರೀಟ್ ರಸ್ತೆ ಕಾಮಗಾರಿ ಕೊನೆಗೂ ದುರಸ್ತಿ ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಮಾಗಂದಡಿ ಪರಿಶಿಷ್ಟ ಪಂಗಡ ಕಾಲೋನಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಬಜಪೆ ಮೂಲದ ಗುತ್ತಿಗೆದಾರ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿದ್ದರು.

ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೂ ಅಲ್ಲದೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಪ್ರಕಟವಾಗಿದ್ದು ಕೂಡಲೇ ಎಚ್ಚೆತ್ತ ಶಾಸಕರು ಕಳಪೆ ಕಾಮಗಾರಿಯನ್ನು ದುರಸ್ತಿ ಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರೂ ದುರಸ್ತಿ ಪಡಿಸದೆ ಸಂಚಾರ ತ್ರಾಸದಾಯಕವಾಗಿತ್ತು.

ಆದರೆ ಪಬ್ಲಿಕ್ ನೆಕ್ಸ್ಟ್ ಕಳಪೆ ಕಾಮಗಾರಿ ಬಗ್ಗೆ ಬೆಂಬಿಡದೆ ಬುಧವಾರ ವರದಿ ಮಾಡಿದ್ದು ಕೂಡಲೇ ಸ್ಥಳೀಯ ಪಂಚಾಯತ್ ಸದಸ್ಯ ಹರಿಪ್ರಸಾದ್ ಕಾರ್ಯಪ್ರವೃತ್ತರಾಗಿ ಬೇರೆ ಗುತ್ತಿಗೆದಾರರ ಮುಖಾಂತರ ಕಾಂಕ್ರೀಟ್ ರಸ್ತೆಯನ್ನು ದುರಸ್ತಿ ಪಡಿಸಿದ್ದಾರೆ.

ಈ ರಸ್ತೆಯು ತೋಕೂರು ಪ್ರಧಾನ ರಸ್ತೆಯಿಂದ ಕವಲೊಡೆಯುತ್ತಿದ್ದು ಸುಮಾರು ಒಂದು ಫರ್ಲಾಂಗ್ ಡಾಮರೀಕರಣ ವಿಲ್ಲದೆ ಸಂಚಾರ ದುಸ್ತರವಾಗಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

16/09/2021 11:11 pm

Cinque Terre

15.87 K

Cinque Terre

0

ಸಂಬಂಧಿತ ಸುದ್ದಿ