ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಕಳೆದ ಕೆಲ ತಿಂಗಳಿನಿಂದ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಮುಗಿಯದ ಗೋಳಾಗಿ ಪರಿಣಮಿಸಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲ್ಕಿ ಬಸ್ ನಿಲ್ದಾಣದ ಬಳಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ಅರ್ಧಂಬರ್ಧ ಕಾಮಗಾರಿಯಿಂದ ನಿಲ್ದಾಣ ಕೆಸರುಮಯವಾಗಿದೆ.
ಪೈಪ್ ಲೈನ್ ಕಾಮಗಾರಿಗೆ ಅಗೆಯುವಾಗ ಇದ್ದ ಉತ್ಸಾಹ ಫಿನಿಶಿಂಗ್ ಮಾಡುವಾಗ ಅವೈಜ್ಞಾನಿಕ ಕಾಮಗಾರಿಯಿಂದ ಮೆಡಿಕಲ್ ಎದುರು ಅಪಾಯಕಾರಿಯಾಗಿ ಪರಿಣಮಿಸಿದೆ.ಕಾಮಗಾರಿ ನಡೆಸುವಾಗ ಆಗೆದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಚರಂಡಿಯಲ್ಲಿ ಹಾಕಿದ ಮಣ್ಣನ್ನು ತೆರವುಗೊಳಿಸದೆ ಹೆದ್ದಾರಿಯಲ್ಲಿ ಮಳೆನೀರು ಹರಿದು ಕೃತಕ ನೆರೆ ಉಂಟಾಗಿದೆ.
ಇನ್ನೊಂದೆಡೆ ಪುನರೂರು ಕಾಂಪ್ಲೆಕ್ಸ್ ಹೆದ್ದಾರಿ ಬದಿಯಲ್ಲಿ ಪೈಪ್ ಲೈನ್ ಗೆ ತೋಡಿದ ಅಪಾಯಕಾರಿಯಾದ ಬೃಹದಾಕಾರದ ಹೊಂಡ ತೆರೆದ ಸ್ಥಿತಿಯಲ್ಲಿದ್ದು ನಿಧಾನಗತಿಯ ಕಾಮಗಾರಿಯಿಂದ ಶಾಲಾ ಮಕ್ಕಳು ಮತ್ತು ಪಾದಚಾರಿಗಳು ನಡೆದಾಡಲು ತೀವ್ರ ತೊಂದರೆಯಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅದಾನಿ ಗ್ಯಾಸ್ ಪೈಪ್ ಲೈನ್ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
12/09/2021 12:05 pm