ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶಿಮಂತೂರು ಎಳತ್ತೂರು ರಸ್ತೆ ಪ್ರಯಾಣ ದುಸ್ತರ

ಮುಲ್ಕಿ: ಮುಲ್ಕಿ ಸಮೀಪದ ಕುಬೇವೂರು ರೈಲ್ವೆ ಮೇಲ್ಸೇತುವೆಯಿಂದ ಶಿಮಂತೂರು ದೇವಸ್ಥಾನ ಹಾಗೂ ಎಳತ್ತೂರು ರಸ್ತೆ ಪ್ರಯಾಣ ದುಸ್ತರವಾಗಿದ್ದು ಶೀಘ್ರ ದುರಸ್ತಿ ಪಡಿಸಲು ನಾಗರಿಕರು ಆಗ್ರಹಿಸಿದ್ದಾರೆ.

ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಶಿಮಂತೂರು ದ್ವಾರದಿಂದ ದೇವಸ್ಥಾನದ ವರೆಗಿನ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ. ದೇವಸ್ಥಾನದ ಬಳಿಯ ಕಿರುಸೇತುವೆ ಸಮೀಪ ಪ್ರಧಾನ ರಸ್ತೆಯಲ್ಲಿ ಭಾರಿ ಮಳೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೆಸರು ನೀರು ನಿಂತು ಪ್ರಯಾಣಕ್ಕೆ ತೀವ್ರ ತೊಂದರೆಯಾಗಿದೆ.

ಕಳೆದ ದಿನದ ಹಿಂದೆ ಸ್ಥಳೀಯ ಯುವಕ ಸುಭಾಷ್ ಎಂಬವರು ರಸ್ತೆಯಲ್ಲಿ ನಿಂತಿದ್ದ ಕೆಸರು ನೀರನ್ನು ತೆರವುಗೊಳಿಸಿ ಶ್ರಮದಾನ ನಡೆಸಿದ್ದಾರೆ. ಆದರೆ ಈ ರಸ್ತೆಯಲ್ಲಿ ಶಾಶ್ವತವಾಗಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ಅದೇ ರೀತಿ ಪಂಜಿನಡ್ಕ ಎಳತ್ತೂರು ಕಿನ್ನಿಗೋಳಿ ಸಂಪರ್ಕ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಡಾಮರೀಕರಣ ನಾಶವಾಗುತ್ತಿದ್ದು ದಾನಿಗಳಿಂದ ನಿರ್ಮಾಣವಾದ ಬಸ್ಸು ನಿಲ್ದಾಣ ಗಿಡಮರಬಳ್ಳಿ ಗಳಿಂದ ತುಂಬಿಹೋಗಿದ್ದು ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

08/09/2021 01:41 pm

Cinque Terre

16.84 K

Cinque Terre

0

ಸಂಬಂಧಿತ ಸುದ್ದಿ