ಮುಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ತೀವ್ರ ಕೆಟ್ಟುಹೋಗಿದ್ದು ಗ್ರಾಮೀಣ ಭಾಗದ ಗ್ರಾಮಸ್ಥರಿಗೆ ಮುಗಿಯದ ಗೋಳಾಗಿ ಪರಿಣಮಿಸಿದೆ.
ಸುಮಾರು ಮೂವತ್ತರಿಂದ ನಲವತ್ತು ಕುಟುಂಬಗಳು ನೆಲೆಸಿರುವ ದೇಂದಡ್ಕ ರಸ್ತೆ ಸುಮಾರು ಒಂದು ಕಿಮೀ ನಷ್ಟು ಕಾಂಕ್ರೀಟೀಕರಣ ಕ್ಕೆ ಬಾಕಿ ಇದ್ದು ಕಚ್ಚಾ ರಸ್ತೆಯಿಂದ ಸಂಚರಿಸಲು ಬಿಡಿ ನಡೆದಾಡಲು ತೀವ್ರ ಅನಾನುಕೂಲವಾಗಿದೆ.
ಕಳೆದ ವರ್ಷಗಳ ಹಿಂದೆ ಶಾಸಕ ಉಮಾನಾಥ ಕೋಟ್ಯಾನ್ ಅನುದಾನದಲ್ಲಿ ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗಿದ್ದು ಸುಮಾರು 30ಲಕ್ಷ ವೆಚ್ಚದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಅನುದಾನ ಕೊರತೆಯಿಂದ ನಿಲ್ಲಿಸಲಾಗಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಗಾತ್ರದ ಹೊಂಡಗಳಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಎರಡು ವಾಹನಗಳು ಒಟ್ಟಿಗೆ ಸಂಚರಿಸಲು ಅನಾನುಕೂಲವಾಗಿದ್ದು ದೇಂದಡ್ಕ ಮಾರ್ಗಸೂಚಿ ನಾಮಫಲಕ ಉಲ್ಟಾ ಪಲ್ಟಾ ಹಾಕಿದ್ದು ವಾಹನಿಗರ ದಿಕ್ಕು ತಪ್ಪಿಸುತ್ತಿದೆ.
ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯ ನವೀನ್ ಚಂದ್ರ ಶೆಟ್ಟಿ ಮಾತನಾಡಿ ರಸ್ತೆ ಅವ್ಯವಸ್ಥೆ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ್ದು ದುರಸ್ತಿಪಡಿಸುವ ಭರವಸೆ ನೀಡಿದ್ದಾರೆ ಎಂದರು.
Kshetra Samachara
28/08/2021 12:36 pm