ಬಜಪೆ: ಕಟೀಲು-ಬಜಪೆ ರಾಜ್ಯ ಹೆದ್ದಾರಿ 67ರ ಕಟೀಲು ದೇವರಗುಡ್ಡೆ ಕ್ರಾಸ್ ಬಳಿ ರಸ್ತೆಯ ಅಂಚಿನ ಗುಡ್ಡ ಸಹಿತ ಬೃಹತ್ ಗಾತ್ರದ ಕಲ್ಲುಗಳು ಮಳೆಗಾಲ ಆರಂಭದಿಂದಲೂ ಕುಸಿಯುತ್ತಲೇ ಇರುತ್ತಿತ್ತು. ಪದೇ ಪದೇ ಗುಡ್ಡವು ಕುಸಿಯುತ್ತಿರುವ ಪರಿಣಾಮವಾಗಿ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಆದರೆ ಇದೀಗ ಕುಸಿಯುತ್ತಿರುವ ರಸ್ತೆಯ ಅಂಚುಗಳಿಗೆ ತಡೆಗೋಡೆಯ ಕಾಮಗಾರಿಯು ಬರದಿಂದ ಸಾಗುತ್ತಿದೆ.
ಗುಡ್ಡ ಕುಸಿತವನ್ನು ತಡೆಯಲು ಇದೀಗ ತಡೆಗೋಡೆಯ ನಿರ್ಮಾಣವು ಮಳೆ ಹಾನಿ ಪರಿಹಾರ ನಿಧಿಯಿಂದ ಸುಮಾರು 15 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿದೆ. ಕಳೆದ ವರ್ಷ ಕಟೀಲು ಗಿಡಿಗೆರೆಯಿಂದ ಎಕ್ಕಾರು ಹುಣ್ಸೆಕಟ್ಟೆ ತನಕದ ರಸ್ತೆಯು ಆಗಲೀಕರಣಗೊಂಡಿತ್ತು. ಆದರೆ ಕೆಲ ಕಡೆಗಳಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಗಳು ನಡೆದಿತ್ತು. ಕಟೀಲು ದೇವರಗುಡ್ಡೆಯ ಕ್ರಾಸ್ ಬಳಿ ರಸ್ತೆಯ ಅಂಚುಗಳಲ್ಲಿದ್ದ ಬೃಹತ್ ಆಕಾರದ ಕಲ್ಲುಗಳಿದ್ದವು. ಈ ಕಲ್ಲುಗಳನ್ನು ತೆರವು ಮಾಡಲು ಕೆಲ ತಿಂಗಳುಗಳು ಬೇಕಾಗಿತ್ತು. ಇದರಿಂದಾಗಿ ಇಲ್ಲಿ ರಸ್ತೆಯ ಅಂಚುಗಳಿಗೆ ತಡೆಗೋಡೆಯನ್ನು ನಿರ್ಮಿಸಲು ಅಸಾಧ್ಯವಾಗಿತ್ತು. ಆದರೆ ಇದೀಗ ರಸ್ತೆಯ ಅಂಚುಗಳ ಗುಡ್ಡದ ಸಮೀಪದ ಬೃಹತ್ ಕಲ್ಲುಗಳನ್ನು ತೆಗೆಯಲಾಗಿದ್ದು, ತಡೆಗೋಡೆ ನಿರ್ಮಾಣದ ಕಾಮಗಾರಿಯು ಬರದಿಂದ ಸಾಗುತ್ತಿದೆ.
Kshetra Samachara
22/08/2021 06:31 pm