ಮುಲ್ಕಿ: ಕಳೆದ ಭಾನುವಾರ ಕೊರೊನಾ ಕರ್ಫ್ಯೂ ವೀಕೆಂಡ್ ದಿನದಲ್ಲಿ ಏಕಾಏಕಿ ಕುಸಿದು ಬಿದ್ದ ಮುಲ್ಕಿ ಮೀನು ಮಾರುಕಟ್ಟೆ ರಸ್ತೆ ಬಳಿಯ ಕಟ್ಟಡದ ಸ್ಲ್ಯಾಬ್ ನ್ನು ಗುರುವಾರ ತಾತ್ಕಾಲಿಕವಾಗಿ ದುರಸ್ತಿ ಪಡಿಸಿದ್ದಾರೆ.
ಕಳೆದ ಭಾನುವಾರ ಮುಲ್ಕಿ ಬಸ್ಸು ನಿಲ್ದಾಣದ ಬಳಿಯ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡದ ಎದುರು ಭಾಗದ ಸ್ಲಾಬ್ ಏಕಾಏಕಿ ಕುಸಿತ ಕಂಡಿದ್ದು ಬೀಳುವಾಗ ಭಾರೀ ಶಬ್ದ ಉಂಟಾಗಿ ಕೆಳ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಜೀವಭಯದಿಂದ ಸ್ಥಳದಿಂದ ಓಡಿ ಹೋಗಿದ್ದರು.
ಈ ಕಟ್ಟಡದ ಎದುರು ಭಾಗ ಕಳೆದ ತಿಂಗಳ ಹಿಂದೆ ಅಧಾನಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿರುವಾಗ ಬಿರುಕು ಬಿಟ್ಟಿದ್ದು ಕಂಪನಿಯ ಗುತ್ತಿಗೆದಾರರ ಜೊತೆ ವಾಗ್ವಾದ ನಡೆಸಿ ಬಳಿಕ ದುರಸ್ತಿ ಪಡಿಸಲಾಗಿತ್ತು.
ಅದಾನಿ ಪೈಪ್ಲೈನ್ ಅವೈಜ್ಞಾನಿಕ ಕಾಮಗಾರಿಯಿಂದ ಕಂಪೆನಿ ವಿರುದ್ಧ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸರಕಾರ ಹಾಗೂ ಪರಿಸರ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
Kshetra Samachara
19/08/2021 08:42 pm