ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣ: ಡಿ.ಎಸ್.ವೀರಯ್ಯ

ಮಂಗಳೂರು: ನಗರದ ಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇದಕ್ಕಾಗಿ ಎನ್ಎಂಪಿಟಿ 13-15 ಎಕರೆ ವಿಶಾಲ ಪ್ರದೇಶವನ್ನು ನೀಡುತ್ತಿದೆ. ಇನ್ನಷ್ಟೇ ಡಿಪಿಆರ್ ತಯಾರಾಗಬೇಕಿದ್ದು, ಮುಂದಿನ ತಿಂಗಳು ಈ ಬಗ್ಗೆ ಎನ್ಎಂಪಿಟಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಆ ಬಳಿಕ‌ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮೂಲಕ‌ ಒಂದು ಟರ್ಮಿನಲ್ ನಲ್ಲಿ‌ 1-2 ಸಾವಿರದಷ್ಟು ಲಾರಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸರಕು ಸಾಗಾಟದ ಮಾಡುವ ಲಾರಿ ನಿಲುಗಡೆಗೆ ರಾಜ್ಯದಲ್ಲಿ ಹೆಚ್ಚು ಸೌಲಭ್ಯ ಕೊಟ್ಟಿಲ್ಲ. ಅಪಘಾತ ನಡೆಯುವ ನಿಟ್ಟಿನಲ್ಲಿ ಶಿಸ್ತುಬದ್ಧವಾದ ಸುಸಜ್ಜಿತ ಟ್ರಕ್ ಟರ್ಮಿನಲ್ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಗತ್ಯವಿದೆ. ಈ ಟರ್ಮಿನಲ್ ಗಳಲ್ಲಿ ಪೆಟ್ರೋಲ್ ಬಂಕ್, ಶೌಚಾಲಯ, ಹೊಟೇಲ್ ಗಳು, ವೈದ್ಯಕೀಯ ಸೌಲಭ್ಯ, ಪೊಲೀಸ್ ಠಾಣೆ, ಸ್ಪೇರ್ ಪಾರ್ಟ್ಸ್ ಮಳಿಗೆ, ವಸತಿಗಾಗಿ ಲಾಡ್ಜ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಇದಕ್ಕೆ ಇಂತಿಷ್ಟು ಎಂದು ದರ ನಿಗದಿ ಮಾಡಲಾಗುತ್ತದೆ ಎಂದು ಡಿ.ಎಸ್. ವೀರಯ್ಯ ಹೇಳಿದರು.

Edited By : Vijay Kumar
Kshetra Samachara

Kshetra Samachara

19/08/2021 08:37 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ