ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿ: ಕೇಂದ್ರ ಸಚಿವೆಗೆ ಮನವಿ

ಹೆಬ್ರಿ: ಹೆಬ್ರಿ ಪೇಟೆಯ ಮೂಲಕವೇ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ವಿಜೇಂದ್ರ ಶೆಟ್ಟಿ ನೇತೃತ್ವದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪೇಟೆಯಲ್ಲಿ ನಿರ್ಮಾಣವಾದರೆ ಹೆಬ್ರಿಯ ಸಮಗ್ರ ಅಭಿವದ್ಧಿಗೆ ಪೂರಕವಾಗುತ್ತದೆ. ಪೇಟೆಯ ಬದಲು ಬೈಪಾಸ್ ನಿರ್ಮಿಸಲು ಒತ್ತಡಗಳಿದ್ದರೂ ನಿಗದಿತ ನಕ್ಷೆಯಂತೆ ಹೆಬ್ರಿಯ ಪೇಟೆಯಲ್ಲೇ ನಿರ್ಮಿಸುವಂತೆ ವಿಜೇಂದ್ರ ಶೆಟ್ಟಿ ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಸಿ.ಎಂ ಪ್ರಸನ್ನ ಕುಮಾರ್ ಶೆಟ್ಟಿ ,ಹೆಬ್ರಿ ಘಟಕದ ನಿತೀಶ್ ಎಸ್ಪಿ ಇದ್ದರು.

Edited By : PublicNext Desk
Kshetra Samachara

Kshetra Samachara

19/08/2021 02:12 pm

Cinque Terre

5.59 K

Cinque Terre

1

ಸಂಬಂಧಿತ ಸುದ್ದಿ