ಮಂಗಳೂರು ; ಮಂಗಳೂರು ಹಾಗೂ ಗುರುಪುರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಲೋಕೋಪಯೋಗಿ ಇಲಾಖೆಯ ನಬಾರ್ಡ್ ಆರ್‌ಐಡಿಎಫ್ 25ನೇ ಯೋಜನೆಯಡಿ 16 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ `ಬಂಗ್ಲೆ ಅಂಗನವಾಡಿ' ಕೇಂದ್ರದ ನೂತನ ಕಟ್ಟಡ ಉದ್ಘಾಟನೆಯನ್ನುಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು. ಗುರುಪುರ ಪಂಚಾಯತ್ ಕಚೇರಿಯ ಸಮೀಪದ ದ.ಕ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇದಾಗಿದ್ದು.
ಈ ಸಂದರ್ಭದಲ್ಲಿ ಗುರುಪುರ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್,ಪ0ಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ,ಉಪಾಧ್ಯಕ್ಷೆ ದಿಲ್‌ಶಾದ್ ಎ, ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಜಿ ಎಂ ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ, ದಾವೂದ್, ನಳಿನಿ ಶೆಟ್ಟಿ, ಸಫರಾ ಎನ್, ರೆಹನಾ ಎಚ್, ಅಶ್ರಫ್ ಎನ್, ಉಪ ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ನವನೀತ ಮಾಳವ, ದಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಾ ಬೋವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಮಂಗಳೂರು(ಗ್ರಾಮಾ0ತರ) ಶೈಲಾ ಕೆ ಕಾರಗಿ, ಬಾಲ ವಿಕಾಸ ಸಮಿತಿ ಅಧ್ಯಕ್ಷ ಸಂಶದ್, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಸಂಜೀವ ಕುಮಾರ್ ಜಿ ಕೆ, ಗುತ್ತಿಗೆದಾರರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಮಾಲಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Kshetra Samachara
18/08/2021 06:22 pm