ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆಎಸ್ ರಾವ್ ನಗರದಲ್ಲಿ ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಅವೈಜ್ಞಾನಿಕ ಕಾಮಗಾರಿ ಆಕ್ರೋಶ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆ ಎಸ್ ರಾವ್ ನಗರದ ಪ್ರಧಾನ ರಸ್ತೆಯಲ್ಲಿ ಕೊಲ್ನಾಡು ವಿದ್ಯುತ್ ಕಾರ್ಯಾಗಾರದಿಂದ ಕಿನ್ನಿಗೋಳಿ ಸಮೀಪದ ಗುತ್ತಕಾಡು ವಿನಲ್ಲಿ ಆರಂಭಗೊಳ್ಳಲಿರುವ ಉದ್ಯಮವೊಂದಕ್ಕೆ 33 ಕೆವಿ ವಿದ್ಯುತ್ ಲೈನ್ ಭೂಗತ ಕೇಬಲ್ ಅಳವಡಿಕೆ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು ಸ್ಥಳೀಯ ನಗರ ಪಂಚಾಯತ್ ಸದಸ್ಯರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.

ಕೋಲ್ನಾಡು ವಿದ್ಯುತ್ ಸ್ಟೇಷನ್ ನಿಂದ ಕೆಎಸ್ ರಾವ್ ನಗರದ ಜನನಿಬಿಡ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಭೂಗತ ವಿದ್ಯುತ್ ಕೇಬಲ್ ಗಳನ್ನು ಯಾವುದೇ ರಕ್ಷಣಾ ಕವಚಗಳನ್ನು ಅಳವಡಿಸದೆ ಮೂಲ್ಕಿ ನಗರ ಪಂಚಾಯಿತಿಗೆ ನೀರುಣಿಸುವ ಕುಡಿಯುವ ನೀರಿನ ಪೈಪಿನ ಜೊತೆಗೆ ಹಾಕಲಾಗಿದೆ ಎಂದು ನಗರ ಪಂಚಾಯತ್ ಸದಸ್ಯೆ ವಿಮಲಾ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕುಡಿಯುವ ನೀರಿನ ಪೈಪು ಗಳಿಗೆ ಆಗಾಗ ಹಾನಿಯಾಗುತ್ತಿದ್ದು ರಸ್ತೆಬದಿಯಲ್ಲಿ ಅದನ್ನು ಸರಿಪಡಿಸು ವಾಗ ಭೂಗತ ವಿದ್ಯುತ್ ಕೇಬಲ್ ಗಳಿಗೆ ಹಾನಿಯಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಗರ ಪಂಚಾಯತ್ ಸದಸ್ಯ ಮುನ್ನ ಯಾನೆ ಮಹೇಶ ಮಾತನಾಡಿ ಸ್ಥಳೀಯ ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಏಕಾಏಕಿ ಅನೇಕ ಕಾಂಕ್ರೆಟ್ ರಸ್ತೆ ಗಳಿಗೆ ಹಾನಿ ಮಾಡಿ ಅವೈಜ್ಞಾನಿಕ ರೀತಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಸುಮಾರು ಎರಡು ಕಿಲೋಮೀಟರ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು ಕೂಡಲೇ ನಿಲ್ಲಿಸಬೇಕು ಹಾಗೂ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ನಗರ ಪಂಚಾಯತ್ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ಐಡಿಯಲ್ ಐಸ್ ಕ್ರೀಂ ಫ್ಯಾಕ್ಟರಿ ಗೆ ವಿದ್ಯುತ್ ಮುಲ್ಕಿಯ ಕೋಲ್ನಾಡು ವಿದ್ಯುತ್ ಸ್ಟೇಷನ್ ಗಳನ್ನು ಅಳವಡಿಸುತ್ತಿದ್ದಾರೆ. ಕಾಮಗಾರಿಗೆ ನಮ್ಮ ಅಭ್ಯಂತರವಿಲ್ಲ ಆದರೆ ಜನರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ಕೆಎಸ್ ರಾವ್ ನಗರ ಜನನಿಬಿಡ ಪ್ರದೇಶವಾಗಿದ್ದು ರಸ್ತೆಬದಿಯಲ್ಲಿ ಮನೆಗಳು ಇವೆ, ಮಕ್ಕಳು ಆಟವಾಡುತ್ತಿದ್ದಾರೆ ಅನಾಹುತ ನಡೆದರೆ ಯಾರು ಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕಾಮಗಾರಿ ನಿಲ್ಲಿಸಬೇಕು ಇಲ್ಲದಿದ್ದರೆ ನಗರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ. ಕಾಮಗಾರಿ ಬಗ್ಗೆ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಾತನಾಡಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಸ್ಥಳೀಯರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡೇ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

13/01/2021 04:05 pm

Cinque Terre

20.92 K

Cinque Terre

2

ಸಂಬಂಧಿತ ಸುದ್ದಿ