ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬ್ರಹ್ಮಾವರ-ಹೆಬ್ರಿ-ಸೀತಾನದಿ ಮುಖ್ಯ ರಸ್ತೆ ಅಗಲೀಕರಣ: ಶಾಸಕ ರಘುಪತಿ ಭಟ್ ಮನವೊಲಿಕೆ

ಉಡುಪಿ: ಬ್ರಹ್ಮಾವರ - ಹೆಬ್ರಿ - ಸೀತಾನದಿ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಶಾಸಕ ಕೆ. ರಘುಪತಿ ಭಟ್ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರೂ. 28 ಕೋಟಿ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದೆ.

ರಸ್ತೆ ಹಾದು ಹೋಗುವ ಕುಂಜಾಲು ಪೇಟೆ ಬಳಿ ಇರುವ ಖಾಸಗಿ ಜಾಗದ ಮಾಲಕರಿಂದ ತಡೆ ಉಂಟಾಗಿದ್ದು, ಈ ಸಂಬಂಧ ಇಂದು ಶಾಸಕ ಕೆ. ರಘುಪತಿ ಭಟ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖಾಸಗಿ ಜಾಗದ ಸರ್ವೆ ನಡೆಸಿ ಗಡಿ ಗುರುತು ಪಡಿಸಿದ ನಂತರ ಖಾಸಗಿ ಜಾಗದ ಮಾಲಕರೊಂದಿಗೆ ಚರ್ಚಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ಮನವಿಗೆ ರಸ್ತೆಗೆ ಜಾಗ ಬಿಟ್ಟುಕೊಡಲು ಸಮ್ಮತಿ ಸೂಚಿಸಿದರು.

ಜಿಲ್ಲಾ ಬಿಜೆಪಿ ಗ್ರಾಮೀಣ ಪ್ರಕೋಷ್ಠಗಳ ಸಂಚಾಲಕರಾದ ರಾಜೀವ್ ಕುಲಾಲ್, ನೀಲಾವರ ಗ್ರಾಪಂ ಸದಸ್ಯರಾದ ಮಹೇಂದ್ರ ಕುಮಾರ್, ರಮೇಶ್ ಪೂಜಾರಿ, ಆರೂರು ಗ್ರಾಪಂ ಸದಸ್ಯರಾದ ಗುರುರಾಜ್ ರಾವ್, ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್ ಮತ್ತು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್, ಪಿ.ಡಬ್ಲ್ಯೂ.ಡಿ ಇಲಾಖೆಯ ಸಹಾಯಕ ಅಭಿಯಂತರ ಗಿರೀಶ್, ಭೂ ಮಾಪನ ಅಧಿಕಾರಿಗಳು ಪಕ್ಷದ ಹಿರಿಯರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/01/2021 07:49 am

Cinque Terre

23.18 K

Cinque Terre

2

ಸಂಬಂಧಿತ ಸುದ್ದಿ