ಉಡುಪಿ: ಅಂಗನವಾಡಿ ನೌಕರರನ್ನು ಕೊರೊನಾ ವಾರಿಯರ್ಸ್ ಅಂತ ಕರೀತಾರೆ. ಆದ್ರೆ, ಕೊರೊನಾ ಅಟ್ಟಹಾಸದ ಅವಧಿಯಲ್ಲಿ ಸಾವನ್ನಪ್ಪಿದ ಕೊರೊನಾ ವಾರಿಯರ್ಸ್ ಗೆ ಸರಕಾರ ಇನ್ನೂ ಪರಿಹಾರ ನೀಡಿಲ್ಲ.
ಈ ತನಕ ರಾಜ್ಯದಲ್ಲಿ 27 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಆದರೆ, 26 ಮಂದಿಗೆ ಸರಕಾರ ಪರಿಹಾರ ನೀಡದೇ ನೆಪ ಹೇಳುತ್ತಿದೆ ಎಂದು ಉಡುಪಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2600 ರೂ. ಸಂಬಳ ಪಡೆಯುವ ಬಿಸಿಯೂಟ ನೌಕರರಿಗೆ ಸೆಪ್ಟೆಂಬರ್ ನಿಂದ ಸಂಬಳವೇ ನೀಡಿಲ್ಲ.
ನಾಲ್ಕು ತಿಂಗಳ ಸಂಬಳ ಸರಕಾರ ಬಾಕಿ ಇರಿಸಿದೆ. ಎಲ್ಲ ಕೆಲಸಗಳನ್ನು ಮಾಡಿಸಿ ಸರಕಾರ ನಮಗೆ ಅನ್ಯಾಯ ಎಸಗಿದೆ. ಪ್ರತೀ ಬಾರಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ ಮಾತ್ರ ಸಿಗುತ್ತಿದೆ.
ಬೇಡಿಕೆ ಈಡೇರದಿದ್ದರೆ ಈ ಬಾರಿ ಬಜೆಟ್ ಸೆಷನ್ ಸಂದರ್ಭ ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ವರಲಕ್ಷ್ಮೀ ಎಚ್ಚರಿಸಿದರು.
Kshetra Samachara
02/01/2021 11:32 am