ಮಂಗಳೂರು: ಹಿಂದೆ ಆನೆಗಳು ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಬರುತ್ತಿದ್ದ ಕಾರ್ಕಳ ತಾಲೂಕಿನ 26ಎಕರೆ ವಿಸ್ತೀರ್ಣದ ಆನೆಕೆರೆ ಚತುರ್ಮುಖ ಕೆರೆಬಸದಿ ಶಿಥಿಲಾವಸ್ಥೆಯಲ್ಲಿದೆ. ಇದೀಗ ಈ ಕೆರೆಯು ವಿಶಿಷ್ಟ ವಾಸ್ತುಶೈಲಿಯಿಂದ 2.72 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿದೆ.
ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಕಾರ್ಕಳದ ಶಾಸಕರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೂ ಆಗಿರುವ ಸುನಿಲ್ ಕುಮಾರ್ ಅವರ ಮುತುವರ್ಜಿಯಿಂದ ಬಸದಿಗೆ 50 ಲಕ್ಷ ರೂ. ಹಾಗೂ ಬಸದಿಯ ಆವರಣ ಗೋಡೆಯ ಹೊರಗೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕಾರ್ಯಗತಗೊಂಡಿದೆ. ಅಲ್ಲದೆ ಆನೆಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಇನ್ನೂ ಹೆಚ್ಚಿನ ಅನುದಾನ ಸರಕಾರದಿಂದ ಒದಗಿಸಿ ಕೊಡಲಾಗುತ್ತದೆ ಎಂದು ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಆನೆಕೆರೆ ಚತುರ್ಮುಖ ಬಸದಿಯ ಜೀರ್ಣೋದ್ಧಾರ ಕಾರ್ಯ 2023ರ ಫೆಬ್ರವರಿ ವೇಳೆಗೆ ಸಂಪೂರ್ಣಗೊಳ್ಳಲಿದೆ. ಮಾರ್ಚ್ ನೊಳಗೆ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಸಲಾಗುತ್ತದೆ. ಕೆರೆಯ ಮಧ್ಯಭಾಗದಲ್ಲಿರುವ ಇಂತಹ ಬಸದಿಯ ದೇಶದಲ್ಲಿಯೇ ಅತಿ ಅಪರೂಪ ಎಂದು ಗುಣಪಾಲ ಕಡಂಬ ಎಂದು ಹೇಳಿದರು.
Kshetra Samachara
26/09/2022 06:46 pm