ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕೊಳಚಿಕಂಬಳ ಬೀಚ್ ರಸ್ತೆ ಬದಿಯ ಸುಮಾರು 10ರಿಂದ 15 ದಾರಿದೀಪಗಳನ್ನು ದುಷ್ಕರ್ಮಿಗಳು ನಾಶಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಬೈಕಿನಲ್ಲಿ ಬಂದ ಕಿಡಿಗೇಡಿ ಯುವಕರು ರಾ. ಹೆ. 66ರ ಕ್ಷೀರಸಾಗರದ ಕೊಕ್ಕರಕಲ್ಲು ಬಳಿಯಿಂದ ಪಡು ಬೈಲ್ ಮೂಲಕ ಬೈಕಿನಲ್ಲಿ ಬಂದು ಸುಮಾರು 10ರಿಂದ 15 ದಾರಿ ದೀಪಗಳನ್ನು ಕಲ್ಲು ಹೊಡೆದು ನಾಶಮಾಡಿ ಪರಾರಿಯಾಗಿದ್ದಾರೆ.
ಪಡು ಬೈಲ್ ಅಣೆಕಟ್ಟು ಬಳಿಯಿಂದ ಶುರುವಾದ ದಾರಿದೀಪದ ಹಾನಿ ಚಟುವಟಿಕೆ ಕೊಳಚಿಕಂಬಳ ಕೊನೆವರೆಗೆ ನಡೆದಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಡಾ.ಹರಿಶ್ಚಂದ್ರ ಸಾಲಿಯಾನ್ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ದುಷ್ಕರ್ಮಿಗಳ ಅಟ್ಟಹಾಸದಿಂದ ಸ್ಥಳದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿದೆ. ಕೊಳಚಿಕಂಬಳ ಬೀಚ್ ಗೆ ಎಲ್ಲೆಲ್ಲಿಂದಲೋ ಯುವಕರ ದಂಡು ಬಂದು ಮದ್ಯ ಸೇವಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಲ್ಲಲ್ಲಿ ಮಾರಾಮಾರಿ ಕೂಡ ನಡೆದಿದ್ದು ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
Kshetra Samachara
24/10/2020 01:01 pm