ಬೈಂದೂರು: ಭಾರೀ ಮಳೆಯಾಗಿ ಸಾಕಷ್ಟು ಹಾನಿಗೊಳಗಾದ ಬೈಂದೂರು ತಾಲೂಕಿನಲ್ಲಿ ಸದ್ಯ ಮಳೆಯ ಅಬ್ಬರ ತಣ್ಣಗಾಗಿದೆ. ವರುಣಾರ್ಭಟದಿಂದ ಉಂಟಾದ ನೆರೆಯೂ ಇಳಿದಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಭಾರೀ ಮಳೆಯ ಬಳಿಕ ಗುಡ್ಡ ಜರಿತ ಮತ್ತು ಭೂಕುಸಿತದ ಆತಂಕ ಈ ಭಾಗದಲ್ಲಿ ಎದುರಾಗಿದೆ. ಧಾರಾಕಾರ ಮಳೆಯ ಪರಿಣಾಮ ಒತ್ತಿನೆಣೆಯ ಸೇಳ್ಳಾಕುಳಿ ಸಮೀಪದ ನದಿ ಕಣಿವೆ ಪಕ್ಕದಲ್ಲಿ ಮಣ್ಣು ನದಿಗೆ ಕುಸಿದಿದೆ.
ಮಳೆ ಹೀಗೇ ಮುಂದುವರಿದರೆ ಹೆದ್ದಾರಿಗೆ ಅಪಾಯ ಎದುರಾಗುವ ಆತಂಕ ಸ್ಥಳೀಯರದ್ದು. ಆದರೆ, ಈ ಹಿಂದೆ ಕುಸಿತ ಕಂಡಿರುವ ಒತ್ತಿನೆಣೆಯ ತಿರುವು ಭಾಗದಲ್ಲಿ ಮರಳಿನ ಚೀಲ ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಐಆರ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
05/08/2022 11:28 am