ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ನಿನ್ನೆ (ಬುಧವಾರ) ಸ್ವಲ್ಪ ಬಿಡುವು ಪಡೆದಿದ್ದರೂ ಇಂದು ಬೆಳಗ್ಗಿನಿಂದಲೇ ಮಳೆ ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ.
ಇಂದು ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಾಗರಿಕರ ರಕ್ಷಣೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸದಾ ಸನ್ನದ್ಧವಾಗಿದ್ದು, ಆಪತ್ತುಗಳು ಎದುರಾದಲ್ಲಿ ಟೋಲ್ ಫ್ರೀ ಸಂಖ್ಯೆ 1077 ಕ್ಕೆ ಕರೆ ಮಾಡಬಹುದು.
ಈಗಾಗಲೇ ಜಿಲ್ಲೆಯಲ್ಲಿ 20 ಮಂದಿ ಸಿಬ್ಬಂದಿಯಿರುವ ಎನ್ ಡಿಆರ್ ಎಫ್ ತಂಡ ಬೀಡು ಬಿಟ್ಟಿದೆ. ಅಲ್ಲದೆ 67 ಸಿಬ್ಬಂದಿಯಿರುವ ಎಸ್ ಡಿಆರ್ ಎಫ್ ತಂಡವೂ ಸನ್ನದ್ಧವಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ 120 ಮಂದಿ ಸಿಬ್ಬಂದಿಯಿರುವ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿದೆ. ಹೋಮ್ ಗಾರ್ಡ್ ತಂಡವೊಂದನ್ನು ನಿಯೋಜನೆಗೊಳಿಸಲಾಗಿದೆ.
Kshetra Samachara
07/07/2022 12:55 pm