ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತಗ್ಗಿದ ಮಳೆ, ಸಹಜ ಸ್ಥಿತಿಯತ್ತ ದ.ಕ ಜಿಲ್ಲೆ

ಮಂಗಳೂರು: ಮುಂಗಾರು ಬಳಿಕ ಮೊದಲ ಬಾರಿಗೆ ಮೊನ್ನೆ ರಾತ್ರಿಯಿಂದ ಬಿರುಸು ಪಡೆದಿದ್ದ ಮಹಾಮಳೆಗೆ ನಿನ್ನೆ ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತಗೊಂಡಿತ್ತು. ಮಹಾನೆರೆಗೆ ತತ್ತರಿಸಿದ್ದ ಜನತೆಯು ಇಂದು ಮಳೆಯ ಬಿರುಸು ಕಡಿಮೆಯಾದ್ದರಿಂದ ಕೊಂಚ ಉಸಿರು ಬಿಡುವಂತಾಗಿದೆ.

ನಿನ್ನೆ ಸಂಜೆಯಾಗುತ್ತಲೇ ಮಳೆಯ ಬಿರುಸು ಕಡಿಮೆಯಾಗಿದ್ದು, ರಾತ್ರಿಯೂ ಮಳೆಯ ಪ್ರಮಾಣ ಕಡಿಮೆಯಿತ್ತು. ಇಂದು ಬೆಳಗ್ಗೆಯೂ ಮಂಗಳೂರಿನಲ್ಲಿ ವಾತಾವರಣ ಪ್ರಶಾಂತವಾಗಿದ್ದು, ಆಕಾಶ ತಿಳಿಯಾಗಿದೆ. ನಿನ್ನೆ ಇಡೀ ದಿನ ಮಂಕಾದ ವಾತಾವರಣವಿದ್ದ ಮಂಗಳೂರು ಇಂದು ಶುಭ್ರವಾಗಿದೆ. ಜನರೂ ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆ 8.30ವರೆಗೆ ಆರೆಂಜ್ ಅಲರ್ಟ್ ಇದ್ದರೂ, ಮಳೆಯ ಆರ್ಭಟವಿಲ್ಲ‌. ಶಾಲೆಗೂ ಇಂದು ರಜೆ ಘೋಷಣೆಯಾಗಿದೆ‌. ಒಟ್ಟಿನಲ್ಲಿ ನಿನ್ನೆಯ ಮಳೆಗೆ ತತ್ತರಿಸಿದ್ದ ಜನತೆಗೆ ಇಂದು ಕೊಂಚ ಉಸಿರು ಬಿಡುವಂತಾಗಿದೆ.

Edited By :
Kshetra Samachara

Kshetra Samachara

01/07/2022 10:13 am

Cinque Terre

6.78 K

Cinque Terre

0

ಸಂಬಂಧಿತ ಸುದ್ದಿ