ಮಣಿಪಾಲ: ಮಣಿಪಾಲ ಸಮೀಪದ ಪರ್ಕಳದಲ್ಲಿ ಭಾರೀ ಗಾಳಿ-ಮಳೆಗೆ ಬೃಹತ್ ಬಾದಾಮಿ ಮರ ಉರುಳಿ ಬಿದ್ದು ಹಾನಿ ಸಂಭವಿಸಿದೆ.
ಪರ್ಕಳದ ಮೀನು ಮಾರುಕಟ್ಟೆ ಎದುರಿನ ಬಾದಾಮಿ ಮರವು ಬುಡ ಸಮೇತ ಆಶಾ ಜನರಲ್ ಸ್ಟೋರ್ ಅಂಗಡಿಯ ತಗಡಿನ ಸೀಟಿನ ಮೇಲೆ ಬಿದ್ದಿದೆ.
ಅದೇ ರೀತಿ ಪರ್ಕಳ ಪೇಟೆಯಲ್ಲಿ ಉದ್ಯಮಿ ಗೋಪಾಲ್ ಆಚಾರ್ಯ ಎಂಬವರ ಮನೆಯ ತೆಂಗಿನ ಮರ ಬುಡ ಸಮೇತ ಪಕ್ಕದಲ್ಲಿರುವ
ಅಂಚೆ ಕಚೇರಿಯ ಕಟ್ಟಡದ ಮೇಲೆ ಬಿದ್ದು ಹಾನಿಯಾಗಿದೆ.
Kshetra Samachara
30/06/2022 06:59 pm