ಮಲ್ಪೆ: ಉಡುಪಿಯ ಮಲ್ಪೆ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕರಾವಳಿಯಲ್ಲಿ ಮಳೆ ಕ್ಷೀಣಿಸಿದ್ದು ಮುಂಗಾರು ಮಳೆಯ ಅಬ್ಬರ ಶುರುವಾಗಿಲ್ಲ. ಹೀಗಾಗಿ ಸದ್ಯ ಪ್ರವಾಸಿಗರಿಗೆ ಸಮುದ್ರದ ಅಲೆಗಳ ಜೊತೆಗೆ ಆಟವಾಡುವುದಕ್ಕೆ ಅವಕಾಶವಿದ್ದು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.
ಪ್ರತಿ ವರ್ಷ ಜೂನ್ ಬಂದರೆ ಕರಾವಳಿಯಲ್ಲಿ ಮಳೆ ಜೋರಾಗಿ ಸುರಿಯುವ ಕಾರಣ, ಸಮುದ್ರ ಪ್ರಕ್ಷುಬ್ಧ ಆಗಿರುತ್ತೆ. ಹೀಗಾಗಿ ಸಮುದ್ರ ಸ್ನಾನಕ್ಕೆ ಅವಕಾಶ ಇರುವುದಿಲ್ಲ. ಆದರೆ ಈ ಬಾರಿ ಜೂನ್ ಮೊದಲ ವಾರ ಮಳೆ ಕ್ಷೀಣಿಸಿದ್ದು ಹಾಗೂ ಕಡಲ ಅಲೆಗಳ ಅಬ್ಬರ ಕಡಿಮೆ ಇರುವ ಕಾರಣ ಸಮುದ್ರ ಸ್ನಾನಕ್ಕೆ ಅವಕಾಶ ನೀಡಲಾಗುತ್ತಿದೆ.
ದೂರದ ಊರುಗಳಿಂದ ಉಡುಪಿಗೆ ಬರುವ ಪ್ರವಾಸಿಗರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಯ ಪ್ರವಾಸಿಗರು ಕಡಲ ಅಲೆಗಳಲ್ಲಿ ಮಿಂದೇಳುತ್ತಿದ್ದಾರೆ.ಮುಂಗಾರು ಅಬ್ಬರ ಕರಾವಳಿಯಲ್ಲಿ ಕೆಲವೇ ದಿನಗಳಲ್ಲಿ ಶುರುವಾಗಲಿದ್ದು,ಬಳಿಕ ಸಮುದ್ರಕ್ಕೆ ಇಳಿಯುವುದಕ್ಕೆ ನಿಷೇಧ ಇರುತ್ತದೆ.
Kshetra Samachara
07/06/2022 06:13 pm