ಮಲ್ಪೆ: ಮಲ್ಪೆಯ ಹೊಚ್ಚಹೊಸ ಫ್ಲೋಟಿಂಗ್ ಬ್ರಿಡ್ಜ್ ಕಂಪ್ಲೀಟ್ ಫ್ಲೋಟಿಂಗ್ ಆಗಿದೆ! ಹೌದು. ಉದ್ಘಾಟನೆಯಾದ ಎರಡೇ ದಿನದಲ್ಲಿ ತೇಲು ಸೇತುವೆ ನೀರುಪಾಲಾಗಿದೆ.
ನಿನ್ನೆ (ಭಾನುವಾರ)ದಿಂದ ಮಲ್ಪೆ ಕಡಲು ತೀವ್ರ ಪ್ರಕ್ಷುಬ್ಧಗೊಂಡಿದೆ. ಪ್ರಕ್ಷುಬ್ಧ ತೆರೆಯಿಂದಾಗಿ ಫ್ಲೋಟಿಂಗ್ ಬ್ರಿಡ್ಜ್‌ಗೆ ತೀವ್ರತರದ ಹಾನಿ ಉಂಟಾಗಿದೆ. ಹೀಗಾಗಿ ನಿನ್ನೆ ಸಂಜೆ ನಾಲ್ಕು ಗಂಟೆಯಿಂದಲೇ ಸೇವೆ ಸ್ಥಗಿತಗೊಳಿಸಲಾಗಿದೆ. ಸದ್ಯ ತೇಲು ಸೇತುವೆಯನ್ನು ಮರುಜೋಡಣೆ ಮಾಡಿ, ಕಡಲು ಶಾಂತವಾದ ಬಳಿಕ ಪುನರಾರಂಭವಾಗಲಿದೆ.
Kshetra Samachara
09/05/2022 11:59 am