ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುರತ್ಕಲ್ ಕಡಲ ಕಿನಾರೆಯಲ್ಲಿ ತೈಲ ಜಿಡ್ಡು ಪತ್ತೆ!

ಸುರತ್ಕಲ್: ನಗರದ ದೊಡ್ಡಕೊಪ್ಪಲು ಬಳಿಯ ಸುರತ್ಕಲ್ ಬೀಚ್ ಪರಿಸರದಲ್ಲಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ತೈಲ ಜಿಡ್ಡು ಗೋಚರವಾಗಿದೆ.

ಬೃಹತ್ ಹಡಗುಗಳನ್ನು ಬಂದರು ತೀರ ಪ್ರದೇಶದಲ್ಲಿ ಲಂಗರು ಹಾಕಲಾಗುವ ಸಂದರ್ಭ ತೈಲ ಜಿಡ್ಡಿನ ತ್ಯಾಜ್ಯಗಳನ್ನು ಸಮುದ್ರಕ್ಕೆ ಸುರಿಯಲಾಗುತ್ತದೆ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದರೂ, ಸಮಸ್ಯೆಗೆ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ.

ಬಂದರು ಒಳ ಭಾಗದಲ್ಲಿ ಅಳಿದುಳಿದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಶುಲ್ಕವನ್ನು ಪಾವತಿಸಬೇಕೆಂದು ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಹಡಗಿನ ತೈಲ ಜಿಡ್ಡು ತ್ಯಾಜ್ಯಗಳನ್ನು ಸುರಿದು ಹೋಗಲಾಗುತ್ತಿದೆ. ಈ ಬಗ್ಗೆ ಡಿಜಿಸಿಎ ಸಮರ್ಪಕವಾದ ಕಾನೂನು ಜಾರಿಗೊಳಿಸಿದ್ದರು ಇದು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ತೈಲ ಜಿಡ್ಡು ಮೀನಿನ ಅಭಾವ ಹಾಗೂ ಮೀನು ಸೇವನೆ ಮಾಡುವವರ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರಲಿದೆ. ಇದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Edited By :
Kshetra Samachara

Kshetra Samachara

14/05/2022 01:26 pm

Cinque Terre

6.04 K

Cinque Terre

0

ಸಂಬಂಧಿತ ಸುದ್ದಿ