ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹೆಬ್ಬಂಡೆ ಮೇಲಿನ ಲೈಟ್ ಹೌಸ್ ದಾರಿಗೆ ಕಲ್ಲಿನ ಅಡ್ಡಗಾಲು; ಪ್ರವಾಸಿಗರ ಪಡಿಪಾಟಲು!

ವರದಿ: ಶಫೀ ಉಚ್ಚಿಲ

ಕಾಪು: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕಾಪು ಲೈಟ್ ಹೌಸ್ ಕೂಡ ಒಂದು.ಹೌದು. ಬ್ರಿಟಿಷರ ಕಾಲದಲ್ಲಿ ಸಮುದ್ರ ತೀರದ ಹೆಬ್ಬಂಡೆಯ ಮೇಲೆ ನಿರ್ಮಾಣಗೊಂಡಿರುವ ಇಲ್ಲಿನ ಲೈಟ್ ಹೌಸ್ ವೀಕ್ಷಣೆಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಆದರೆ, ಇತ್ತೀಚಿನ ದಿನಗಳಿಂದ ಲೈಟ್ ಹೌಸ್ ಬಂಡೆಯ ಮೇಲೇರುವುದೇ ಹರಸಾಹಸವಾಗಿದೆ.

ಕಳೆದ ಸೆಪ್ಟೆಂಬರ್ 20 ರಂದು ಸುರಿದ ಮಹಾಮಳೆಗೆ ಇಡೀ ಉಡುಪಿಯೇ ತತ್ತರಿಸಿ ಹೋಗಿತ್ತು.ನೆರೆ ಅಬ್ಬರಕ್ಕೆ ಲೈಟ್ ಹೌಸ್‌ಗೆ ಹೋಗುವ ಮೆಟ್ಟಿಲಿನ ತಳ ಭಾಗ ಸಂಪೂರ್ಣ ಕುಸಿದು ಹೋಗಿತ್ತು. ಮೆಟ್ಟಿಲಿಗೆ ಬಳಸಿದ ಕಲ್ಲುಗಳು ಬುಡದಲ್ಲಿ ರಾಶಿ ಬಿದ್ದು ಸಂಪರ್ಕವೇ ಕಳೆದುಕೊಂಡಿದೆ. ಲಾಕ್ ಡೌನ್ ಬಳಿಕ ಇದೀಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರಾಶಿ ಬಿದ್ದ ಕಲ್ಲಿನ‌ ಮೇಲೆ ದಿನನಿತ್ಯ ಸಾವಿರಾರು ಪ್ರವಾಸಿಗರು, ಅದರಲ್ಲೂ ವಯಸ್ಸಾದವರು‌, ಮಕ್ಕಳು ನಡೆದು ಹೋಗುತ್ತಿದ್ದು, ಸ್ವಲ್ಪ ಹೆಜ್ಜೆ ತಪ್ಪಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದ್ದರೂ, ಸಂಬಂಧಿತ ಇಲಾಖೆ ಮೆಟ್ಟಿಲು ಸರಿಪಡಿಸದೆ ಮೌನವಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಲ್ಲಾದರೂ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ, ಇತ್ತ ಕಡೆ ಚಿತ್ತ ಹರಿಸಲಿ ಎನ್ನುವುದೇ ಪ್ರವಾಸಿಗರ ಬೇಡಿಕೆ.

Edited By : Manjunath H D
Kshetra Samachara

Kshetra Samachara

08/11/2020 11:03 am

Cinque Terre

40.03 K

Cinque Terre

2

ಸಂಬಂಧಿತ ಸುದ್ದಿ