ಮಂಗಳೂರು: ಮಂಗಳೂರು ನಗರಿ ಸ್ಮಾರ್ಟ್ ಸಿಟಿಯಾಗಿ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಹೊಂಡಗಳು ಮಾತ್ರ ಕಡಿಮೆಯಾಗಿಲ್ಲ. ಇದೀಗ ಪುಟ್ಟ ಬಾಲಕನೋರ್ವನು ತನ್ನ ಪುಟ್ಟ ಕೈಗಳಿಂದ ಒಂದೊಂದೇ ಕಲ್ಲುಗಳನ್ನು ಹೆಕ್ಕಿ ತಂದು ರಸ್ತೆ ಹೊಂಡವನ್ನು ಮುಚ್ಚುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ತಲೆತಗ್ಗಿಸುವಂತೆ ಮಾಡಿದೆ.
ನಗರದ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿಯ ಕಾಂಕ್ರಿಟ್ ರಸ್ತೆ ಪಕ್ಕದಲ್ಲಿ ಹೊಂಡ ನಿರ್ಮಾಣವಾಗಿತ್ತು. ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳು ಹೊಂಡ ಗಮನಿಸಿದೆ ಎಡವುತ್ತಿದ್ದರು. ಇದನ್ನು ಗಮನಿಸಿದ ಈ ಬಾಲಕ ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದಾನೆ. ಭಾರದ ಪುಸ್ತಕಗಳಿರುವ ಬ್ಯಾಗ್ ಅನ್ನು ಹೊತ್ತುಕೊಂಡೇ ಕಲ್ಲುಗಳನ್ನು ಹೆಕ್ಕಿ ಹಾಕಿ ಹೊಂಡ ಮುಚ್ಚುವ ಕಾರ್ಯ ಮಾಡಿದ್ದಾನೆ. ಅಂದ ಹಾಗೇ ಈತನ ಹೆಸರು ಮೊಹಮ್ಮದ್ ಅರ್ಹಮ್. ಎಕ್ಕೂರು ಕೇಂದ್ರೀಯ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿ. ಇವನ ಕಾರ್ಯಕ್ಕೆ ಎಲ್ಲೆಡೆಯಿಂದ ಶಹಬ್ಬಾಸ್ ಗಿರಿ ದೊರಕುತ್ತಿದೆ.
Kshetra Samachara
19/08/2022 01:41 pm