ಕಾಪು: ಕಾಪು ತಾಲೂಕಿನ ಮೂಳೂರಿನಲ್ಲಿ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಇವತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು..
ಜಿಲ್ಲಾಧಿಕಾರಿ ಕೂರ್ಮಾರಾವ್, ಎಸಿ ರಾಜು ಮತ್ತು ಅಧಿಕಾರಿಗಳ ಜೊತೆ ಹಾನಿಗೊಳಗಾದ ಪ್ರದೇಶ ವೀಕ್ಷಿಸಿದ ಸಚಿವರು ಜನರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಸಚಿವೆ, ಈ ಭಾಗದಲ್ಲಿ ಕಡಲ್ಕೊರೆತದಿಂದಾಗಿ ಆರೇಳು ಮನೆಗಳು ಸಂಪೂರ್ಣ ನಾಶವಾಗಿವೆ. 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಡೆಗೋಡೆ ಎಲ್ಲೆಲ್ಲಿ ವೀಕ್ ಆಗಿವೆಯೋ ಆ ಭಾಗದಲ್ಲಿ ಸಮುದ್ರದ ಅಲೆಗಳು ಹೊರಗೆ ಬರುತ್ತಿವೆ. ತೆಂಗಿನ ಮರ ಮತ್ತು ರಸ್ತೆಯನ್ನು ಸಮುದ್ರದ ಅಲೆಗಳು ನಾಶ ಮಾಡುತ್ತಿವೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
Kshetra Samachara
11/07/2022 03:39 pm