ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗಬ್ಬುನಾತ ಬೀರುತ್ತಿದ್ದ ರಾಶಿ ರಾಶಿ ಕಸ ತೆರವು: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ಮಂಗಳೂರು: ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಿಂದ ಬಳಕುಂಜೆಗೆ ಸಂಪರ್ಕಿಸುವ ರಸ್ತೆಯ ಕುಕ್ಕಟ್ಟೆ ಎಂಬಲ್ಲಿ ರಸ್ತೆಯ ಅಂಚಿನ ಗುಡ್ಡ ಪ್ರದೇಶದಲ್ಲಿ ಸಮತಟ್ಟು ಮಾಡಲಾಗಿದ್ದ ಸ್ಥಳದಲ್ಲಿ ರಾಶಿ ರಾಶಿ ಕಸವು ಸಂಗ್ರಹವಾಗಿ ಗಬ್ಬುನಾತ ಬೀರುತ್ತಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಸುದ್ದಿ ಬಿತ್ತರವಾಗಿತ್ತು. ಸುದ್ದಿ ಬಿತ್ತರವಾದ ಒಂದೇ ವಾರದಲ್ಲಿ ಕಸವನ್ನು ಸಂಬಂಧಪಟ್ಟವರು ತೆರವುಗೊಳಿಸಿದ್ದಾರೆ.

ಕಸದ ರಾಶಿ ಇದ್ದ ಸ್ಥಳದಲ್ಲಿದ್ದ ಕಸವನ್ನು ತೆರವುಗೊಳಿಸಿದ್ದಲ್ಲದೆ ಸಮತಟ್ಟು ಮಾಡಲಾಗಿದೆ.ಕಳೆದ ಕೆಲವು ತಿಂಗಳು ಗಳಿಂದ ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವಂತಹ ವಾಹನಿಗರು ಕಸದ ರಾಶಿಯಿಂದಾಗಿ ಮೂಗು ಮುಚ್ಚಿಕೊಂಡೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು.ಇದೀಗ ಕಸದ ರಾಶಿಯನ್ನು ತೆರವುಗೊಳಿಸಿದ್ದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ಪಬ್ಲಿಕ್ ನೆಕ್ಸ್ಟ್‌ನ ಇಂತಹ ಸಾಮಾಜಿಕ ಕಳಕಳಿಯ ವರದಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Edited By :
PublicNext

PublicNext

08/06/2022 10:20 pm

Cinque Terre

47.03 K

Cinque Terre

1

ಸಂಬಂಧಿತ ಸುದ್ದಿ