ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಿರೆ ಹೊಳೆಯ ಸಂಪರ್ಕ ಸೇತುವೆ ಅಪಾಯದ ಸ್ಥಿತಿಯಲ್ಲಿ !

ಉಡುಪಿ: ಉಡುಪಿ ಜಿಲ್ಲೆಯ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆ ಹೊಳೆಗೆ ಅಡ್ಡಲಾಗಿರುವ ಸಂಪರ್ಕ ಸೇತುವೆ ಇದೀಗ ಅಪಾಯದ ಅಂಚಿನಲ್ಲಿದ್ದು,ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸೇತುವೆ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮಾಹಿತಿ ಕಲೆಹಾಕಿದ್ದರೂ ಹೊಸ ಸೇತುವೆ ಕಾಮಗಾರಿ ಮಾತ್ರ ಕನಸಾಗಿಯೇ ಉಳಿದಿದೆ ಎನ್ನುವುದು ಸ್ಥಳೀಯರ ಆರೋಪ.

ಸೇತುವೆ ಸುತ್ತ ಮುತ್ತಲ ಪ್ರದೇಶದಲ್ಲಿ ಬೇಸಗೆಯಲ್ಲಿ ಅವ್ಯಾಹತ ಮರಳುಗಾರಿಕೆ ಮತ್ತು ಮಳೆಗಾಲದಲ್ಲಿ ತೀವ್ರ ನೀರ ರಭಸದಿಂದಾಗಿ ಸೇತುವೆ ಮಧ್ಯಭಾಗ ಮುರಿದು ಹೋಗಿದೆ. ಇದರಲ್ಲಿ ನಡೆದಾಡುವುದೂ ತೀವ್ರ ಅಪಾಯಕಾರಿಯಾಗಿದೆ.ಬೇಳೂರು ಗ್ರಾಮದಿಂದ ಅಚ್ಲಾಡಿ ಗ್ರಾಮಕ್ಕೆ ಪ್ರಮುಖ ಸಂಪರ್ಕ ಸೇತುವೆ ಇದು.

ಇದು ಸುಸ್ಥಿತಿಯಲ್ಲಿದ್ದಿದ್ದೇ ಆದರೆ 1.5 ಕಿ.ಮೀ. ಸಮೀಪದ ಅಂತರದಲ್ಲಿ ಎರಡೂ ಗ್ರಾಮಗಳನ್ನು ಸಂಧಿಸಲು ಸಾಧ್ಯ. ಇಲ್ಲದಿದ್ದರೆ ಸುಮಾರು 8 ಕಿ.ಮೀ. ಸುತ್ತು ಬಳಸಿ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸ್ಥಳೀಯರ ಈ ಸಮಸ್ಯೆಯನ್ನು ಆಲಿಸಿ ಸೂಕ್ತ ಕ್ರಮ ಕೈಗೊಂಡರೆ ಗ್ರಾಮಸ್ಥರಿಗೆ ಸ್ಪಂದಿಸಿದಂತೆ ಆಗುತ್ತದೆ.

ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

Edited By : Manjunath H D
Kshetra Samachara

Kshetra Samachara

19/11/2020 03:14 pm

Cinque Terre

18.49 K

Cinque Terre

1

ಸಂಬಂಧಿತ ಸುದ್ದಿ