ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ : ಬಿ.ಸಿ.ರೋಡ್ ಹೆದ್ದಾರಿಯ ಹೃದಯ : ಇಲ್ಲಿರುವ ಹೊಂಡಗಳಿಗೆ ಸರ್ಜರಿ ಯಾವಾಗ?

ಬಂಟ್ವಾಳ : ಪ್ರತಿ ವರ್ಷವೂ ಹದಗೆಟ್ಟು ಬೃಹತ್ ಗಾತ್ರದ ಹೊಂಡಗಳು ಏಳುವ ಬಿ.ಸಿ.ರೋಡಿನ ‘ಅದೇ’ ಜಾಗದಲ್ಲಿ ಮತ್ತೆ ಹೊಂಡಗಳು ಕಾಣಿಸುತ್ತಿವೆ. ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಪ್ರಕಟವಾಗುತ್ತಿದ್ದಂತೆ ತೇಪೆ ಹಚ್ಚುವ ಕೆಲಸವಾಗುತ್ತದೆ ಮತ್ತೆ ಮಳೆಯಾಗುತ್ತಿದ್ದಂತೆ ಹೊಂಡಗಳ ಗೋಚರವಾಗುತ್ತದೆ.ಬಿ.ಸಿ.ರೋಡಲ್ಲಿ ಎಲ್ಲೆಲ್ಲಿ ಫ್ಲೈಓವರ್ ಹೋಗುತ್ತಿದೆಯೋ ಅದರ ಕೆಳಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಳಗಾತ್ರದ ಹೊಂಡಗಳು ಇದ್ದು, ವಾಹನ ಸವಾರರ ಜೊತೆಗೆ ಪಾದಚಾರಿಗಳೂ ಪರದಾಡುವಂತಾಗಿದೆ.

ಈಗಾಗಲೇ ಹಲವು ಆಟೊಗಳು ಈ ಹೊಂಡಕ್ಕೆ ಬಿದ್ದು, ರಿಪೇರಿಗೆ ಹೋಗಿವೆ.ಹೊಂಡದಲ್ಲಿ ಕೆಸರೂ ತುಂಬಿಕೊಂಡು ಸಂಚಾರ ದುಸ್ತರವಾಗಿದೆ. ಕೆಸರು, ಹೊಂಡ ಮತ್ತು ಬಿಸಿಲಿದ್ದರೆ ಧೂಳು ಬಿ.ಸಿ.ರೋಡನ್ನು ಕಾಡುತ್ತಿದೆ. ಹೊಟ್ಟೆಪಾಡಿಗೆ ದುಡಿಯುವ ನಾವು ನಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಇವುಗಳಿಗೆ ತೇಪೆ ಹಚ್ಚುವ ಬದಲು ಶಾಶ್ವತವಾಗಿ ಸಮಸ್ಯೆಯ ಮೂಲ ಹುಡುಕಿ ರಿಪೇರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

13/10/2020 06:51 pm

Cinque Terre

29.41 K

Cinque Terre

1

ಸಂಬಂಧಿತ ಸುದ್ದಿ